ಕರ್ನಾಟಕ

karnataka

ETV Bharat / international

ರಷ್ಯಾ ಜೊತೆ ಕೆಲಸ ಮಾಡಲು ಚೀನಾ ಸಿದ್ಧ: ಕ್ಸಿ ಜಿನ್‌ಪಿಂಗ್ - ಬೀಜಿಂಗ್

ಎರಡನೇ ಮಹಾಯುದ್ಧದ ವಿಜಯವನ್ನು ದೃಢವಾಗಿ ಕಾಪಾಡಲು ಮತ್ತು ಆ ವಿಜಯಕ್ಕೆ ನ್ಯಾಯ ಒದಗಿಸಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸೇರಲು ಉದ್ದೇಶಿಸಿರುವ ಚೀನಾ ದೇಶವು ರಷ್ಯಾದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.

ವ್ಲಾಡಿಮಿರ್ ಪುಟಿನ್- ಕ್ಸಿ ಜಿನ್‌ಪಿಂಗ್
ವ್ಲಾಡಿಮಿರ್ ಪುಟಿನ್- ಕ್ಸಿ ಜಿನ್‌ಪಿಂಗ್

By

Published : Sep 3, 2020, 10:50 AM IST

ಬೀಜಿಂಗ್: ಎರಡನೇ ಮಹಾಯುದ್ಧದ ವಿಜಯವನ್ನು ದೃಢವಾಗಿ ಕಾಪಾಡಲು ಮತ್ತು ಸಂತ್ರಸ್ತರ ಸಾವು-ನೋವಿಗೆ ನ್ಯಾಯ ಒದಗಿಸಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸೇರಲು ಉದ್ದೇಶಿಸಿರುವ ಚೀನಾ ರಷ್ಯಾದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ವಿಶ್ವ ಫ್ಯಾಸಿಸ್ಟ್ ವಿರೋಧಿ ಯುದ್ಧದ ವಿಜಯದ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ ಕ್ಸಿ, ರಷ್ಯಾದ ವ್ಲಾಡಿಮಿರ್ ಪುಟಿನ್ ಅವರಿಗೆ ವಿನಿಮಯ ಸಂದೇಶದಲ್ಲಿ ತಿಳಿಸಿದ್ದಾರೆ.

"75 ವರ್ಷಗಳ ಹಿಂದೆ ಈ ದಿನದಂದು, ಚೀನಾದ ಪ್ರತಿರೋಧದ ಯುದ್ಧ ಮತ್ತು ಜಪಾನಿನ ಆಕ್ರಮಣಶೀಲತೆಯ ವಿರುದ್ಧ ಸೋವಿಯತ್ ಒಕ್ಕೂಟದ ಯುದ್ಧವು ವಿಜಯವನ್ನು ಸಾಧಿಸಿತು. ಇದು ವಿಶ್ವ ಫ್ಯಾಸಿಸ್ಟ್ ವಿರೋಧಿ ಯುದ್ಧದ ಅಂತಿಮ ವಿಜಯವನ್ನು ಗುರುತಿಸಿತು" ಎಂದು ಅಧ್ಯಕ್ಷ ಉಲ್ಲೇಖಿಸಿದ್ದಾರೆ.

ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಓಷಿಯಾನಿಯಾಗೆ ವಿಸ್ತರಿಸಿದ ಎರಡನೇ ಮಹಾಯುದ್ಧ 100 ಮಿಲಿಯನ್ ಮಿಲಿಟರಿ ಮತ್ತು ನಾಗರಿಕ ಸಾವು-ನೋವುಗಳಿಗೆ ಕಾರಣವಾಯಿತು. ಏಷ್ಯಾ ಮತ್ತು ಯುರೋಪಿನ ಪ್ರಮುಖ ಯುದ್ಧಭೂಮಿಗಳಾಗಿ ಚೀನಾ ಮತ್ತು ರಷ್ಯಾ ವಿಜಯಕ್ಕೆ ಭಾರೀ ತ್ಯಾಗ ಮತ್ತು ಐತಿಹಾಸಿಕ ಕೊಡುಗೆಗಳನ್ನು ನೀಡಿವೆ ಎಂದು ಅವರು ಹೇಳಿದರು.

ABOUT THE AUTHOR

...view details