ಬೀಜಿಂಗ್ :ಟಿಬೆಟ್ನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿ ಜಲವಿದ್ಯುತ್ ಯೋಜನೆ ನಿರ್ಮಿಸಲು ಚೀನಾ ಮುಂದಾಗಿದೆ. ಮುಂದಿನ ವರ್ಷ ಜಾರಿಗೆ ಬರಲಿರುವ 14ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.
ಗುರುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಯಾನ್ ಜಿಯಾಂಗ್, ದೇಶದ 14ನೇ ಪಂಚವಾರ್ಷಿಕ ಯೋಜನೆ (2021-25) ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು 2035ರವರೆಗೆ ರೂಪಿಸಿರುವ ದೀರ್ಘಕಾಲೀನ ಗುರಿಗಳ ಅಡಿ ಈ ಪ್ರಸ್ತಾಪಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಯೋಜನೆಯು ಜಲ ಸಂಪನ್ಮೂಲ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಅನ್ನದಾತರ ಬೃಹತ್ ಪ್ರತಿಭಟನೆಯ ನಡುವೆಯೂ ಕೃಷಿ ಕಾಯ್ದೆಗಳ ಸಮರ್ಥಿಸಿಕೊಂಡ ಮೋದಿ..!