ಕರ್ನಾಟಕ

karnataka

ETV Bharat / international

ಗಡಿ ಉದ್ವಿಗ್ನತೆ ಮಧ್ಯೆ ಭಾರತದಿಂದ ಹಂದಿ ಮಾಂಸ ಆಮದು ನಿಷೇಧಿಸಲು ಮುಂದಾದ ಚೀನಾ - ಭಾರತದಿಂದ ಹಂದಿ, ಕಾಡುಹಂದಿ ಮತ್ತು ಸಂಬಂಧಿತ ಉತ್ಪನ್ನಗಳ ಆಮದನ್ನು ನಿಷೇಧ

ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆಯ ಮಧ್ಯೆ ಭಾರತದಿಂದ ಹಂದಿ ಮಾಂಸ ಆಮದು ನಿಷೇಧಿಸುವ ನಿರ್ಧಾರವನ್ನು ಚೀನಾ ತೆಗೆದುಕೊಂಡಿದೆ.

China to ban pork imports from India to prevent swine fever: Report
ಭಾರತದಿದ ಹಂದಿಮಾಂಸ ಆಮದು ನಿಷೇಧಿಸಲು ಮುಂದಾದ ಚೀನಾ

By

Published : May 29, 2020, 12:35 PM IST

ಬೀಜಿಂಗ್: ಆಫ್ರಿಕನ್ ಹಂದಿ ಜ್ವರದ (ಎಎಸ್ಎಫ್) ಕುರಿತು ಕಳವಳ ವ್ಯಕ್ತಪಡಿಸಿರುವ ಚೀನಾ, ಭಾರತದಿಂದ ಸಾಕು ಹಂದಿ, ಕಾಡು ಹಂದಿ ಮತ್ತು ಸಂಬಂಧಿತ ಉತ್ಪನ್ನಗಳ ಆಮದನ್ನು ನಿಷೇಧಿಸುವುದಾಗಿ ಘೋಷಿಸಿದೆ.

ಈ ಕುರಿತು ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ನೋಟಿಸ್ ನೀಡಿದೆ. ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆಯ ಮಧ್ಯೆ ಈ ನಿರ್ಧಾರವನ್ನು ಚೀನಾ ತೆಗೆದುಕೊಂಡಿರುವುದು ಗಮನಾರ್ಹ.

ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಈ ನಡುವೆಯೇ ಚೀನಾ ಈ ನಿರ್ದಾರಕ್ಕೆ ಬಂದಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ ಅಸ್ಸೋಂನಲ್ಲಿ ದೇಶೀಯ ಹಂದಿಗಳು ಮತ್ತು ಕಾಡುಹಂದಿಗಳಲ್ಲಿ ಎಎಸ್ಎಫ್​ ಇರುವುದರ ಬಗ್ಗೆ ಭಾರತ ವರದಿ ಮಾಡಿದೆ. ಈ ಕಾಯಿಲೆಯು ಅಸ್ಸೋಂನಲ್ಲಿ 14,000 ಕ್ಕೂ ಹೆಚ್ಚು ಹಂದಿಗಳನ್ನು ಬಲಿ ಪಡೆದಿದೆ ಎಂದು ವರದಿಯಾಗಿದೆ.

ABOUT THE AUTHOR

...view details