ಕರ್ನಾಟಕ

karnataka

ETV Bharat / international

ವ್ಯಾಪಕವಾಗಿ ಹರಡುತ್ತಿರುವ ಕರೋನಾ ವೈರಸ್ : ಚೀನಾದಲ್ಲಿ ವನ್ಯಜೀವಿ ವ್ಯಾಪಾರ ನಿಷೇಧ - ಚೀನಾದಲ್ಲಿ ವನ್ಯಜೀವಿ ವ್ಯಾಪಾರ ನಿಶೇಧ

ಚೀನಾದಲ್ಲಿ ಕಾಣಿಸಿಕೊಂಡಿರುವ ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆ ವನ್ಯಜೀವಿ ವ್ಯಾಪಾರವನ್ನು ಚೀನಾವು ತಾತ್ಕಾಲಿಕವಾಗಿ ನಿಷೇಧಿಸಿದೆ.

ಚೀನಾದಲ್ಲಿ ವನ್ಯಜೀವಿ ವ್ಯಾಪಾರ ನಿಶೇಧ
China temporarily bans wildlife trade

By

Published : Jan 26, 2020, 11:40 PM IST

ಬೀಜಿಂಗ್:ಚೀನಾದಲ್ಲಿ ಕಾಣಿಸಿಕೊಂಡಿರುವ ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ವುಹಾನ್‌ನಲ್ಲಿ ವೈರಲ್‌ ಹರಡಿದ ನಂತರ ಚೀನಾವು, ಏಕಾಏಕಿ ವನ್ಯಜೀವಿ ವ್ಯಾಪಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಯಾವುದೇ ವನ್ಯಜೀವಿಗಳನ್ನು ಯಾವುದೇ ಮಾರುಕಟ್ಟೆಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಸಾಗಿಸಲು ಅಥವಾ ಮಾರಾಟ ಮಾಡದಂತೆ ಆದೇಶಿಸಿದೆ.

ನಿಯಮ ಉಲ್ಲಂಘಿಸುವವರನ್ನು ಭದ್ರತಾ ಸೇವೆಗಳಿಗೆ ಕಳುಹಿಸಲಾಗುವುದು, ಮತ್ತುಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಎಚ್ಚರಿಸಲಾಗಿದೆ.

ಹೊಸ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ಸೋಂಕು ಹರಡುವಿಕೆಯನ್ನು ನಿರ್ಬಂಧಿಸಲು ನಿಷೇಧವನ್ನು ಮುಂದುವರಿಸಲಾಗುತ್ತದೆ.

ಕರೋನ ವೈರಸ್​ನಿಂದಾಗಿ ಚೀನಾದಲ್ಲಿ 56 ಸಾವುಗಳು ಹಾಗೂ 1,975 ಸೋಂಕು ಹರಡಿರುವ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಮಾರಾಟ ನಿಷೇಧವನ್ನು ತರಲಾಗಿದೆ. ಕರೋನಾ ವೈರಸ್ ಪೀಡಿತ ವುಹಾನ್‌ಗೆ ರೈಲು, ವಿಮಾನಗಳು ಮತ್ತು ಇತರ ಸಂಪರ್ಕ ಸೇವೆಗಳನ್ನು ಕಡಿತಗೊಳಿಸಲಾಗಿದ್ದು, ಜೊತೆಗೆ ನಗರದೊಳಗಿನ ಸಾರ್ವಜನಿಕ ಸಾರಿಗೆಯನ್ನು ಕಡಿತಗೊಳಿಸಲಾಗಿದೆ.

ABOUT THE AUTHOR

...view details