ನಾಯ್ಪಿಟಾವ್ (ಮ್ಯಾನ್ಮಾರ್): ಮ್ಯಾನ್ಮಾರ್ ಮತ್ತು ಭಾರತವನ್ನು ಹತೋಟಿಗೆ ತರಲು ಮುಂದಾಗಿರುವ ಚೀನಾ, ಇದೀಗ ಮ್ಯಾನ್ಮಾರ್ನ ನಾಯ್ಪಿಟಾವ್ನ ಭಯೋತ್ಪಾದಕ ಸಂಘಟನೆಯಾದ ಅರಾಕನ್ ಸೇನೆಗೆ ಹಣ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅರಾಕನ್ ಸೇನೆಯು ಸುಮಾರು 50 ಮ್ಯಾನ್‌ಪ್ಯಾಡ್ಸ್ (ಮ್ಯಾನ್-ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ಸ್) ಅಥವಾ ವಾಯು ರಕ್ಷಣಾ ಕ್ಷಿಪಣಿಗಳನ್ನು ಹೊಂದಿದ್ದು, ಈ ಸೇನೆಗೆ ಚೀನಾ ಶೇ. 95 ರಷ್ಟು ಹಣ ಒದಗಿಸುತ್ತಿದೆ. ಈಶಾನ್ಯ ಭಾರತದ ಗಡಿಯಲ್ಲಿ ಅರಾಕನ್ ಸೈನ್ಯ ಕಾರ್ಯ ನಿರ್ವಹಿಸುತ್ತಿರುವುದರಿಂದ ಭಾರತಕ್ಕೆ ಅರಾಕನ್ ಮೂಲಕ ತೊಂದರೆ ಕೊಡಿಸಬಹುದು ಎಂಬುದು ಚೀನಾ ಕುತಂತ್ರವಾಗಿದೆ. ಅಲ್ಲದೇ ಪಶ್ಚಿಮ ಮ್ಯಾನ್ಮಾರ್ ಭಾಗ, ಅಂದರೆ ಭಾರತ-ಮ್ಯಾನ್ಮಾರ್ ಗಡಿಯ ತನ್ನ ಪರಿಧಿ ವಿಸ್ತರಿಸಿಕೊಳ್ಳಬಹುದು ಎಂಬುದು ಚೀನಾದ ದುರಾಲೋಚನೆಯಾಗಿದೆ.