ಕರ್ನಾಟಕ

karnataka

ETV Bharat / international

ಚೀನಾದ ಹೊಸ ಉಪಗ್ರಹ ಶಿಯಾನ್‌-11 ಉಡಾವಣೆ ಪ್ರಯೋಗ ಯಶಸ್ವಿ: ವರದಿ

Shiyan-11: ಬಾಹ್ಯಕಾಶದಲ್ಲೂ ನಿಯಂತ್ರಣ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನೆರೆಯ ಡ್ರ್ಯಾಗನ್‌ ದೇಶ ಚೀನಾ ಇದೀಗ ಶಿಯಾನ್‌-11 ಎಂಬ ಹೊಸ ಉಪಗ್ರಹದ ಉಡಾವಣೆಯ ಪ್ರಯೋಗವನ್ನು ಯಶಸ್ವಿಗೊಳಿಸಿದೆ.

China successfully launches new satellite for testing
ಬಾಹ್ಯಕಾಶಕ್ಕೆ ಕಳುಹಿಸುವ ಚೀನಾದ ಹೊಸ ಉಪಗ್ರಹ ಶಿಯಾನ್‌-11 ಉಡಾವಣೆ ಪ್ರಯೋಗ ಯಶಸ್ವಿ - ವರದಿ

By

Published : Nov 25, 2021, 12:45 PM IST

ಬೀಜಿಂಗ್‌:ಬಾಹ್ಯಕಾಶಕ್ಕೆ ಕಳುಹಿಸುವ ಹೊಸ ಉಪಗ್ರಹದ ಪ್ರಯೋಗವನ್ನು ಚೀನಾ ಯಶಸ್ವಿಯಾಗಿ ಪೂರೈಸಿದೆ ಎಂದು ಆ ದೇಶದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ. Shiyan-11 satellite - ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್‌ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಕುಯಿಝೌ-1ಎ ಉಪಗ್ರಹ ಉಡಾವಣೆ ವಾಹಕದ ಮೂಲಕ ಶಿಯಾನ್‌-11 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

ಉಪಗ್ರಹವು ಅದರ ಪೂರ್ವನಿರ್ಧರಿತ ಕಕ್ಷೆ ಪ್ರವೇಶಿಸಿದೆ ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) ವರದಿ ಮಾಡಿದೆ. ಶಿಯಾನ್-11 ಅನ್ನು ಪರೀಕ್ಷೆಗಾಗಿ ನಿರ್ಮಿಸಲಾಗಿದೆ. ಆದರೆ, ಉಪಗ್ರಹದ ಇತ್ತೀಚಿನ ಕಾರ್ಯಾಚರಣೆಯ ಉದ್ದೇಶವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಹೇಳಿದೆ.

ಶಿಜಿಯಾನ್ ಎಂಬ ಚೀನಾದ ಉಪಗ್ರಹಗಳ ಮತ್ತೊಂದು ಸರಣಿಯನ್ನು ತಂತ್ರಜ್ಞಾನ ಪರಿಶೀಲನೆಗಾಗಿ ಬಳಸಲಾಗುತ್ತದೆ. ಇತ್ತೀಚಿನ ಶಿಜಿಯಾನ್ ಉಪಗ್ರಹ, ಶಿಜಿಯಾನ್ -21 ಅನ್ನು ಅಕ್ಟೋಬರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಆದರೆ, ಹಿಂದಿನ ಶಿಯಾನ್ ಉಪಗ್ರಹ, ಶಿಯಾನ್ -10, ಯೋಜಿತ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಯಾದ ನಂತರ ಉದ್ದೇಶಿಸಿದಂತೆ ಕೆಲಸ ಮಾಡಲಿಲ್ಲ.

Quaizhou-1Aಅನ್ನು ವೇಗ, ಸಣ್ಣ ಗಾತ್ರದ ರಾಕೆಟ್ ಸರಣಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಚೀನಾ ಏರೋಸ್ಪೇಸ್ ಸೈನ್ಸ್ ಮತ್ತು ಇಂಡಸ್ಟ್ರಿ ಕಾರ್ಪೊರೇಷನ್ ವಿನ್ಯಾಸಗೊಳಿಸಿದೆ ಎಂದು ಹೇಳಾಗಿದೆ.

ಇದನ್ನೂ ಓದಿ:S-400 ಖರೀದಿ ವಿಚಾರದಲ್ಲಿ ಭಾರತಕ್ಕೆ ಇನ್ನೂ ಕಾಟ್ಸಾ ಕಾಯ್ದೆಯಿಂದ ರಿಯಾಯಿತಿ ನೀಡಿಲ್ಲ: ಅಮೆರಿಕ ಸ್ಪಷ್ಟನೆ

ABOUT THE AUTHOR

...view details