ಬೀಜಿಂಗ್:ಮೊಬೈಲ್ ಗೇಮ್ ಆ್ಯಪ್ ಪಬ್ ಜಿ ಸೇರಿದಂತೆ 118 ಆ್ಯಪ್ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿ ನಿನ್ನೆ ಮಹತ್ವದ ಆದೇಶ ಹೊರಹಾಕಿದೆ. ಇದಕ್ಕೆ ಚೀನಾದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಚೀನಾ ವಾಣಿಜ್ಯ ಸಚಿವ ಜಾಂಗ್ ಶಾ ಈ ಕುರಿತು ಮಾತನಾಡಿದ್ದು, ಭಾರತ ತೆಗೆದುಕೊಂಡಿರುವ ನಿರ್ಧಾರಕ್ಕೆ ನಮ್ಮಿಂದ ತೀವ್ರವಾದ ವಿರೋಧವಿದೆ. ಭಾರತ ತೆಗೆದುಕೊಳ್ಳುತ್ತಿರುವ ಕ್ರಮ ನಮ್ಮ ಹೂಡಿಕೆದಾರರು ಮತ್ತು ಪೂರೈಕೆದಾರರ ಕಾನೂನು ಹಿತಾಸಕ್ತಿ ಉಲ್ಲಂಘಿಸುತ್ತಿದೆ ಎಂದಿದ್ದಾರೆ. ಜತೆಗೆ ಭಾರತ ತನ್ನ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕು ಎಂದಿದ್ದಾರೆ.
ಚೀನಾಗೆ ಮತ್ತೊಂದು ಹೊಡೆತ: ಪಬ್ಜಿ ಸೇರಿ 118 ಮೊಬೈಲ್ ಆ್ಯಪ್ ನಿಷೇಧಿಸಿದ ಕೇಂದ್ರ
ಗಡಿಯಲ್ಲಿ ಭಾರತದೊಂದಿಗೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ಈ ಹಿಂದಿನಿಂದಲೂ ಸಮರ ಸಾರಿದ್ದು, ಕಳೆದ ಕೆಲ ದಿನಗಳ ಹಿಂದೆ ಟಿಕ್ಟಾಕ್ ಸೇರಿದಂತೆ 59 ಚೀನಾ ಆ್ಯಪ್ ಬ್ಯಾನ್ ಮಾಡಿತ್ತು. ಇದಾದ ಬಳಿಕ ಮತ್ತೊಮ್ಮೆ ಅಂತಹದ್ದೇ ಮತ್ತೊಂದು ನಿರ್ಧಾರಕ್ಕೆ ಕೈಹಾಕಿ ಡ್ರ್ಯಾಗನ್ ರಾಷ್ಟ್ರದ 47 ಆಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿತ್ತು. ನಿನ್ನೆ ಕೂಡ 118 ಆ್ಯಪ್ ಬ್ಯಾನ್ ಮಾಡಿದೆ.
ಕೇಂದ್ರ ಸರ್ಕಾರ ಚೀನಾದ ಒಟ್ಟು 275 ಅಪ್ಲಿಕೇಶನ್ಗಳ ಮೇಲೆ ನಿಗಾ ಇಡಲಾಗಿದ್ದು, ದೇಶದ ಭದ್ರತೆ, ಮಾಹಿತಿ ಸೋರಿಕೆ, ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಅವುಗಳ ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಳ್ಳುತ್ತಿದೆ. ಕೈಗೊಳ್ಳಲಾಗುತ್ತಿದೆ.