ಕರ್ನಾಟಕ

karnataka

ETV Bharat / international

ಚೀನಾದಲ್ಲೂ ಹರಡುತ್ತಿದೆ ಕೋವಿಡ್ ಡೆಲ್ಟಾ ರೂಪಾಂತರ.. 18 ಪ್ರದೇಶಗಳು ಹಾಟ್​ಸ್ಪಾಟ್ - ಕೋವಿಡ್

ಮೊದಲಿಗೆ ಭಾರತದಲ್ಲಿ ಕಾಣಿಸಿಕೊಂಡಿದ್ದ ಡೆಲ್ಟಾ ರೂಪಾಂತರವು ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಬೆನ್ನಲ್ಲೇ ಚೀನಾದಲ್ಲೂ ವ್ಯಾಪಿಸುತ್ತಿದ್ದು, ಜನರಲ್ಲಿ ಭೀತಿ ಸೃಷ್ಟಿಸಿದೆ.

ಚೀನಾ
ಚೀನಾ

By

Published : Aug 1, 2021, 11:03 PM IST

ಬೀಜಿಂಗ್ (ಚೀನಾ):ಕೋವಿಡ್​​ ಡೆಲ್ಟಾ ರೂಪಾಂತರವು ಚೀನಾಗೆ ಲಗ್ಗೆಯಿಟ್ಟಿದ್ದು, 18 ಪ್ರಾಂತ್ಯಗಳಿಗೆ ಹರಡಿದೆ. ಇದೀಗ ಡೆಲ್ಟಾ ರೂಪಾಂತರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಡ್ರ್ಯಾಗನ್​ ರಾಷ್ಟ್ರವನ್ನು ಸಂಕಷ್ಟಕ್ಕೆ ದೂಡಿದೆ. ಕನಿಷ್ಠ 18 ಪ್ರಾಂತ್ಯಗಳ 27 ನಗರಗಳಲ್ಲಿ 300 ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ ಎಂದು ಬೀಜಿಂಗ್, ಜಿಯಾಂಗ್ಸು ಮತ್ತು ಸಿಚುವಾನ್ ಸೇರಿದಂತೆ, ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ದೇಶಾದ್ಯಂತ ಮಧ್ಯಮ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳ ಸಂಖ್ಯೆ ಭಾನುವಾರ 95 ಕ್ಕೆ ಏರಿದೆ. ಅದರಲ್ಲಿ 91 ಮಧ್ಯಮ-ಅಪಾಯದ ಪ್ರದೇಶಗಳು ಮತ್ತು ನಾಲ್ಕು ಹೆಚ್ಚಿನ ಅಪಾಯದ ಪ್ರದೇಶಗಳಾಗಿವೆ. ರಾಜಧಾನಿ ಬೀಜಿಂಗ್​ನಲ್ಲಿಂದು ಎರಡು ಹೊಸ ಕೋವಿಡ್​ ಪ್ರಕರಣಗಳು ದೃಢಪಟ್ಟಿವೆ.

ಬೀಜಿಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಗುರುವಾರ ಮೂವರು ರೋಗಿಗಳಿಗೆ ಕೋವಿಡ್ ಟೆಸ್ಟ್ ಮಾಡಿತ್ತು. ಮೂವರಿಗೂ ಡೆಲ್ಟಾ ರೂಪಾಂತರವಿರುವುದು ದೃಢವಾಗಿದೆ. ಬೀಜಿಂಗ್​ಗೆ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಇಲ್ಲಿನ ಆಡಳಿತ ಆದೇಶ ಹೊರಡಿಸಿದೆ.

ನಾನ್ಜಿಂಗ್‌ನ ಲುಕೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಚ್ಛ ಮಾಡುವವರಲ್ಲಿ ಮೊದಲು ಈ ವೈರಸ್ ಕಾಣಿಸಿಕೊಂಡಿತು. ಬಳಿಕ ಇತರೆ ಪ್ರದೇಶಗಳಿಗೂ ಹರಡಿತು. ಶನಿವಾರ 11,000 ಪ್ರವಾಸಿಗರು ಜಾಂಗ್‌ಜಿಯಾಜಿಗೆ ಭೇಟಿ ನೀಡಿದ್ದರು. ಹಾಗಾಗಿ ಅಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಏಕಾಏಕಿ ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನೆಲೆ ಚೀನಾದ ಉಸಿರಾಟ ರೋಗ ತಜ್ಞ ನಾನ್​ಶನ್​ ಕಳವಳ ವ್ಯಕ್ತಪಡಿಸಿದ್ದಾರೆ.

ನಾನ್ಜಿಂಗ್​ನಲ್ಲಿ ರೋಗ ನಿಯಂತ್ರಣಕ್ಕೆ ಅಲ್ಲಿನ ಆಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೂ, ಸಣ್ಣ ನಗರದಲ್ಲಿ ವೈರಸ್ ಮತ್ತಷ್ಟು ಹರಡುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ದೃಢಪಟ್ಟ ಅನೇಕ ಪ್ರಕರಣಗಳು ಜಾಂಗ್‌ಜಿಯಾಜಿಯ ಮೀಲಿ ಕ್ಸಿಯಾಂಗ್ಕ್ಸಿ ಗ್ರಾಂಡ್ ಥಿಯೇಟರ್​ನಿಂದೇ ಹರಡಿವೆ ಎನ್ನಲಾಗಿದೆ. ಈ ಥಿಯೇಟರ್​ನಲ್ಲಿ ಅಂದಾಜು 2000 ಮಂದಿ ಏಕಕಾಲಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಹಾಗಾಗಿ ಅವರ ಸಂಪರ್ಕಕ್ಕೆ ಬಂದಿದ್ದವರನ್ನೂ ಪತ್ತಹಚ್ಚಲಾಗುತ್ತಿದೆ.

ವಿದೇಶದಿಂದ ಬರುವ ಪ್ರಯಾಣಿಕರನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. 204 ಜನರಲ್ಲಿ ವೈರಸ್ ಪತ್ತೆಯಾಗಿದೆ. ಮುಂದಿನ 10 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಸತಿ ಸೇರಿದಂತೆ ಸಂಪೂರ್ಣವಾಗಿ ಸೋಂಕುರಹಿತಗೊಳಿಸಲಾಗುವುದು ಎಂದು ಲುಕೌ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರದ ವೇಳೆಗೆ ಚೀನಾ ಅಧಿಕೃತವಾಗಿ 93,005 ಪ್ರಕರಣಗಳನ್ನು ವರದಿ ಮಾಡಿದೆ, 1,022 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ 25 ಜನರ ಸ್ಥಿತಿ ಗಂಭೀರವಾಗಿದೆ. 4,636 ಜನರು ವೈರಸ್​ಗೆ ಬಲಿಯಾಗಿದ್ದಾರೆ.

ABOUT THE AUTHOR

...view details