ಬೀಜಿಂಗ್:ಚೀನಾದಲ್ಲಿ ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್ನ 830 ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಇದೀಗ 25ಕ್ಕೆ ಏರಿದೆ. ಇನ್ನೂ ಸೋಂಕು ಹರಡುವ ಸಾಧ್ಯತೆ ಇದ್ದು, ವುಹಾನ್ ಸೇರಿದಂತೆ ಐದು ನಗರಗಳಲ್ಲಿ ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್ಗೆ ಸಾವಿನ ಸಂಖ್ಯೆ 25ಕ್ಕೆ ಏರಿಕೆ: 5 ನಗರಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ - Death toll rises to 25 in 830 reported cases of the new coronavirus in China
ಕೊರೊನಾ ವೈರಸ್ಗೆ ಚೀನಾದಲ್ಲಿ 25 ಮಂದಿ ಬಲಿಯಾಗಿದ್ದು, ಹುಬೈ ಪ್ರಾಂತ್ಯದ ಐದು ನಗರಗಳಲ್ಲಿ ಜನರು ಒಂದೇ ಕಡೆ ಸೇರದಂತೆ ನಿರ್ಬಂಧ ಹೇರಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್
ಗುರುವಾರ ಸಂಜೆ ಚೀನಾದ ಅಧಿಕಾರಿಗಳು ಹುಬೈ ಪ್ರಾಂತ್ಯದ ಐದು ನಗರಗಳಾದ ಹುವಾಂಗ್‌ಗ್ಯಾಂಗ್, ಅಜೋ, ಜಿಜಿಯಾಂಗ್, ಕಿಯಾಂಜಿಯಾಂಗ್ ಹಾಗೂ ವುಹಾನ್ನಲ್ಲಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಈ ನಗರಗಳಲ್ಲಿ ಬಸ್, ರೈಲು ಸಂಚಾರ, ವಿಮಾನ ಸೇವೆ, ಸುರಂಗ ಮಾರ್ಗಗಳು ಹಾಗೂ ದೋಣಿ ಸಂಚಾರ ನಿಷೇಧಿಸಲಾಗಿದ್ದು, ಜನರು ಒಂದೇ ಕಡೆ ಸೇರುವಂತಿಲ್ಲ.
- 11 ಮಿಲಿಯನ್ ಜನಸಂಖ್ಯೆ ಹೊಂದಿರುವ ವುಹಾನ್ನಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾಗಿದೆ. ವಿಶ್ವವಿದ್ಯಾಲಗಳನ್ನು ಹೊಂದಿರುವ, ಪ್ರಮುಖ ಸಾರಿಗೆ ಕೇಂದ್ರವಾದ ವುಹಾನ್ನಲ್ಲಿ ಇದೀಗ ಸಂಚಾರ ವ್ಯವಸ್ಥೆಗೆ ನಿರ್ಬಂಧ ಹೇರಿರುವುದು ನಗರ ಸ್ಥಬ್ಧವಾದಂತಾಗಿದೆ.
- ಇನ್ನು ವೈರಸ್ಗೆ ಬಲಿಯಾಗುತ್ತಿರುವವರ ಸರಾಸರಿ ವಯಸ್ಸು 73 ಆಗಿದ್ದು, ಅತಿ ಹಿರಿಯರ ವಯಸ್ಸು 89 ಹಾಗೂ ಕಿರಿಯರ ವಯಸ್ಸು 48 ಆಗಿದೆ. ಈ ವೈರಸ್ ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿದೆ ಎಂದು ವುಹಾನ್‌ನ ವೈದ್ಯರು ತಿಳಿಸಿದ್ದಾರೆ.
- ಚೀನಾದಲ್ಲಿ ಭಾರತದ ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರು ಭಾರತಕ್ಕೆ ಬಂದರೆ ವೈರಸ್ ಹರಡುವ ಭೀತಿ ಎದುರಾಗಿದ್ದು, ಅಲ್ಲಿಯೇ ಉಳಿದಿದ್ದಾರೆ. ಆದಾಗ್ಯೂ ಕೆಲವರು ರಜಾ ದಿನಗಳಿರುವ ಕಾರಣ ತಮ್ಮ ಮನೆಗಳಿಗೆ ತೆರಳಿದ್ದಾರೆ.
- ವೈರಸ್ ಹರಡುವ ಭೀತಿಯಿಂದ ಬೀಜಿಂಗ್ ಸೇರಿದಂತೆ ಹಲವಾರು ನಗರಗಳು, ಅಲ್ಲಿ ನಡೆಯಬೇಕಿದ್ದ ಸ್ಪ್ರಿಂಗ್ ಫೆಸ್ಟಿವಲ್ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ.
- ಪ್ರಾಂತ್ಯದ ಎಲ್ಲಾ ನಿವಾಸಿಗಳಿಗೆ ಮಾಸ್ಕ್ ಧರಿಸಲು ಆದೇಶಿಸಲಾಗಿದೆ.