ಬೀಜಿಂಗ್: ಪ್ರಪಂಚದಾದ್ಯಂತ ಕೋವಿಡ್-19 ನಿಂದಾಗಿ ಪರಿಸ್ಥಿತಿ ಉಲ್ಭಣಿಸುತ್ತಿದ್ದರೆ, ಇತ್ತ ಚೀನಾ ಮತ್ತು ಅಮೆರಿಕ ನಡುವೆ ವಾಗ್ವಾದ ಪ್ರಾರಂಭವಾಗಿದೆ.
ಚೀನಾ ಹೊಣೆ ಎಂದ ಟ್ರಂಪ್ಗೆ ಡ್ರ್ಯಾಗನ್ ಕೊಟ್ಟ ತಿರುಗೇಟು ಎಂಥಾದ್ದು ಅಂತೀರಾ? - ಚೀನಾ ಮತ್ತು ಅಮೆರಿಕಾ
ಕೋವಿಡ್-19 ನಿಂದಾಗಿ ಪ್ರಸ್ತುತ ಜಗತ್ತಿನಾದ್ಯಂತ ಉಂಟಾಗಿರುವ ಆರೋಗ್ಯ ಬಿಕ್ಕಟ್ಟಿಗೆ ಬೀಜಿಂಗ್ ನೇರ ಹೊಣೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕ ನಮ್ಮ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸಿದೆ ಎಂದು ಹೇಳಿದೆ.
ಆರಂಭಿಕ ಹಂತದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಮಾಹಿತಿಯನ್ನು ಚೀನಾ ಮರೆಮಾಚಿದ್ದರಿಂದ ಇಂದು ವಿಶ್ವವೇ ಬೆಲೆ ತೆರುತ್ತಿದೆ. ಕೊವಿಡ್-19 ನಿಂದಾಗಿ ಪ್ರಸ್ತುತ ಜಗತ್ತಿನಾದ್ಯಂತ ಉಂಟಾಗಿರುವ ಆರೋಗ್ಯ ಬಿಕ್ಕಟ್ಟಿಗೆ ಬೀಜಿಂಗ್ ನೇರ ಹೊಣೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಚೀನಾ ಸರ್ಕಾರ, ಅಮೆರಿಕ ನಮ್ಮ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸಿದೆ ಎಂದು ಹೇಳಿದೆ.
ಈ ಆಪಾದನೆಯು ಮಾನವಕುಲದ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಚೀನಾದ ಜನರು ಮಾಡಿದ ತ್ಯಾಗವನ್ನು ಹಾಗೂ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ಚೀನಾದ ಪ್ರಮುಖ ಕೊಡುಗೆಯನ್ನು ನಿರ್ಲಕ್ಷಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದಾರೆ.