ಕರ್ನಾಟಕ

karnataka

ETV Bharat / international

ಮತ್ತೆ ನರಿ ಬುದ್ದಿ ಪ್ರದರ್ಶಿಸಿದ ಡ್ರ್ಯಾಗನ್​: ಗಾಲ್ವಾನ್ ಕಣಿವೆ ನಮ್ಮ  ಬದಿಯಲ್ಲಿದೆ ಎಂದ ಚೀನಾ! - ವಾಸ್ತವಿಕ ನಿಯಂತ್ರಣ ರೇಖೆ

ಬೀಜಿಂಗ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, ಜೂನ್ 15ರ ರಾತ್ರಿ ಪೂರ್ವ ಲಡಾಕ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಭಾರತವನ್ನು ದೂಷಿಸಿದ್ದಾರೆ. ಜೊತೆಗೆ ಗಾಲ್ವಾನ್ ಕಣಿವೆ ಪ್ರದೇಶ ಚೀನಾ - ಭಾರತ ಗಡಿಯ ಪಶ್ಚಿಮ ಭಾಗದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿದೆ ಎಂದಿದ್ದಾರೆ.

china
china

By

Published : Jun 20, 2020, 8:26 AM IST

ಬೀಜಿಂಗ್ (ಚೀನಾ): ಗಾಲ್ವಾನ್ ಕಣಿವೆಯ ಮೇಲೆ ಚೀನಾ ಸೈನ್ಯದ ಸಾರ್ವಭೌಮತ್ವದ ಹಕ್ಕನ್ನು ಭಾರತ ಈಗಾಗಲೇ ಕಸಿದುಕೊಂಡಿದೆ. ಆದರೆ, ಚೀನಾದ ವಿದೇಶಾಂಗ ಸಚಿವಾಲಯ ಗಾಲ್ವಾನ್ ಕಣಿವೆ ಚೀನಾದ ಬದಿಯಲ್ಲಿದೆ ಎಂದು ಹೇಳಿದೆ.

ಗಾಲ್ವಾನ್ ಕಣಿವೆಯ ಮೇಲಿನ ಚೀನಾದ ಸಾರ್ವಭೌಮತ್ವದ ಹಕ್ಕನ್ನು ಭಾರತ ಈಗಾಗಲೇ ತಳ್ಳಿಹಾಕಿದ್ದು, ಅಂತಹ 'ಉತ್ಪ್ರೇಕ್ಷಿತ' ಮತ್ತು 'ಒಪ್ಪಲಾಗದ' ಹಕ್ಕುಗಳು ತಿಳಿವಳಿಕೆಗೆ ವಿರುದ್ಧವಾಗಿವೆ ಎಂದು ಜೂನ್ 6ರಂದು ನಡೆದ ಉನ್ನತ ಮಟ್ಟದ ಮಿಲಿಟರಿ ಸಂವಾದದ ಸಂದರ್ಭದಲ್ಲಿ ಭಾರತ ಹೇಳಿದೆ.

ಬೀಜಿಂಗ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, ಜೂನ್ 15ರ ರಾತ್ರಿ ಪೂರ್ವ ಲಡಾಕ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಭಾರತವನ್ನು ದೂಷಿಸಿದ್ದಾರೆ.

"ಗಾಲ್ವಾನ್ ಕಣಿವೆ ಚೀನಾ - ಭಾರತ ಗಡಿಯ ಪಶ್ಚಿಮ ಭಾಗದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿದೆ. ಹಲವು ವರ್ಷಗಳಿಂದ ಚೀನಾದ ಗಡಿ ಕಾವಲುಗಾರರು ಗಸ್ತು ತಿರುಗುತ್ತಿದ್ದಾರೆ ಮತ್ತು ಸಾಮಾನ್ಯವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಪರಿಸ್ಥಿತಿಯನ್ನು ಸರಾಗಗೊಳಿಸುವ ಕುರಿತು ಎರಡೂ ಕಡೆಯವರು ಸಂವಹನ ನಡೆಸುತ್ತಿದ್ದಾರೆ.

ABOUT THE AUTHOR

...view details