ಕರ್ನಾಟಕ

karnataka

ETV Bharat / international

ಚೀನಾದಲ್ಲೂ ರೂಪಾಂತರಿ ಕೊರೊನಾದ ಮೊದಲ ಕೇಸ್ ಪತ್ತೆ..! - ವಿಶ್ವದಲ್ಲಿ ಕೊರೊನಾ ಸೋಂಕಿತರು

China reports the first case of the new corona virus strain
ಚೀನಾದಲ್ಲಿ ರೂಪಾಂತರಿ ಕೊರೊನಾ ಪತ್ತೆ

By

Published : Jan 1, 2021, 12:16 AM IST

Updated : Jan 1, 2021, 6:13 AM IST

00:14 January 01

ಕೊರೊನಾ ತವರು ಚೀನಾಗೂ ವಕ್ಕರಿಸಿದ ರೂಪಾಂತರಿ ಕೊರೊನಾ

ನವದೆಹಲಿ:ರೂಪಾಂತರಿ ಕೊರೊನಾ ಎಲ್ಲೆಡೆಯಲ್ಲೂ ಭೀತಿ ಹುಟ್ಟಿಸಿದೆ.  ಕೆಲವು ರಾಷ್ಟ್ರಗಳು ರೂಪಾಂತರಿ ಕೊರೊನಾ ಹಾವಳಿಗೆ ಸಿಲುಕಿ ತತ್ತರಿಸಿವೆ. ಈಗ ಈ ರೂಪಾಂತರಿ ಕೊರೊನಾ ಚೀನಾದಲ್ಲೂ ಪತ್ತೆಯಾಗಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಬ್ರಿಟನ್‌ನಿಂದ ಚೀನಾಕ್ಕೆ ಮರಳಿರುವ 23 ವರ್ಷದ ವಿದ್ಯಾರ್ಥಿನಿಯನ್ನು ಡಿಸೆಂಬರ್ 14ರಂದು ಶಾಂಘೈನಲ್ಲಿ ಪರೀಕ್ಷಿಸಲಾಗಿದ್ದು, ಈಕೆಯಲ್ಲಿ ರೂಪಾಂತರಿ ಕೊರೊನಾ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಆರೋಗ್ಯ ಸಿಬ್ಬಂದಿಗೆ ಉಚಿತ ಕೊರೊನಾ ಲಸಿಕೆ ನೀಡಲು ಚೀನಾ ಮೊರೆಹೋದ ಪಾಕ್​

ಇದು ಚೀನಾದ ಮೊದಲ ರೂಪಾಂತರಿ ಕೊರೊನಾ ಸೋಂಕಿನ ಪ್ರಕರಣವಾಗಿದ್ದು, ಚೀನಾಗೆ ಬಹುದೊಡ್ಡ ಅಪಾಯ ತಂದೊಡ್ಡಲಿರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಈಗ ಸದ್ಯಕ್ಕೆ ರೂಪಾಂತರಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ನಿಯೋಜಿತ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆಕೆಯ  ಸಂಪರ್ಕಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Last Updated : Jan 1, 2021, 6:13 AM IST

ABOUT THE AUTHOR

...view details