ಬೀಜಿಂಗ್:ಕಳೆದ ನಾಲ್ಕು ತಿಂಗಳ ಬಳಿಕ ಚೀನಾದಲ್ಲಿ ವಾಸಿಸುವ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಮೊದಲ ಬಾರಿಗೆ ಚೀನಿಗರಲ್ಲಿ ಕಂಡುಬರದ ಹೊಸ ಸೋಂಕು: ವಿದೇಶಿಗರಿಂದ ಪ್ರಕರಣಗಳ ಏರಿಕೆ - ಚೀನಾದಲ್ಲಿ ಕೊರೊನಾ ಸೋಂಕು
ಗುರುವಾರ ಚೀನಾದಲ್ಲಿ 34 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇವರ್ಯಾರೂ ಚೀನಾದ ನಿವಾಸಿಗಳಲ್ಲ. ಬದಲಿಗೆ ವಿದೇಶದಿಂದ ಬಂದವರು ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಸ್ಥಳೀಯ ಚೀನಿಗರಿಗಿಲ್ಲ ಕೊರೊನಾ ಸೋಂಕು
ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿರುವ ಡ್ರ್ಯಾಗನ್ ದೇಶದಲ್ಲಿ ಇದೀಗ ಮಾರಕ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಆಯೋಗ ತಿಳಿಸಿದೆ. ಗುರುವಾರ 34 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆದರೆ, ಇವರು ಚೀನಾದ ನಿವಾಸಿಗಳಲ್ಲ, ವಿದೇಶದಿಂದ ಚೀನಾಕ್ಕೆ ಬಂದವರದ್ದು ಎಂದು ಆಯೋಗ ತಿಳಿಸಿದೆ.
ಕಳೆದ 2 ವಾರಗಳಲ್ಲಿ ಮೊದಲ ಬಾರಿಗೆ ವಿದೇಶದಿಂದ ಬಂದವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಸಂಖ್ಯೆಯಲ್ಲಿ ಏರಿಕೆಯಾಗಿದೆ.