ಕರ್ನಾಟಕ

karnataka

ETV Bharat / international

ಡ್ರ್ಯಾಗನ್ ನಾಡಲ್ಲಿ ಕೋವಿಡ್ 19ಗೆ ಮತ್ತೆ 44 ಮಂದಿ ಬಲಿ... ತಿಂಗಳ ಅವಧಿಯಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣ ದಾಖಲು - ಒಂದು ತಿಂಗಳ ಪ್ರಕರಣಗಳಲ್ಲಿ ಅತಿ ಕಡಿಮೆ ಏರಿಕೆ

ಚೀನಾದಲ್ಲಿ ಕೊರೋನಾ ವೈರಸ್​ ಸೋಂಕಿನಿಂದಾಗಿ ಮತ್ತೆ 44 ಮಂದಿ ಸಾವಿಗೀಡಾಗಿದ್ದು, 327 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಈ ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ಅಂಕಿ ಅಂಶ.

China reports 44 new virus deaths, lowest rise in new cases in over a month
44 ಹೊಸ ವೈರಸ್ ಸಾವುಗಳನ್ನು ವರದಿ ಮಾಡಿದ ಚೀನಾ.

By

Published : Feb 28, 2020, 8:38 AM IST

ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್​ ಸೋಂಕಿನಿಂದಾಗಿ ಮತ್ತೆ 44 ಮಂದಿ ಸಾವಿಗೀಡಾಗಿದ್ದು, 327 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಈ ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ಅಂಕಿ ಅಂಶ.

ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ ಚೀನಾದಲ್ಲಿ ಕೊರೋನಾ ವೈರಸ್​​ಗೆ ಬಲಿಯಾದವರ ಸಂಖ್ಯೆ 2788 ತಲುಪಿದೆ. ಬೀಜಿಂಗ್​​ನಲ್ಲಿ ಎರಡು, ಹುಬೈನಲ್ಲಿ 29 ಸಾವಿನ ಸಂಖ್ಯೆ ವರದಿಯಾಗಿದೆ.

78,824 ಜನರು ಈಗ ಮುಖ್ಯವಾಗಿ ಕೋವಿಡ್​-19 ಸೋಂಕಿಗೆ ಒಳಗಾಗಿದ್ದು, 259 ಮಂದಿಗೆ ಸೋಂಕು ತಗುಲಿದೆ. ಜನವರಿ 24 ರಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿ ನೋಡಿದರೆ, ಶುಕ್ರವಾರದ ಸೋಂಕಿತರ ಸಾವಿನ ಪ್ರಮಾಣ, ಸೋಂಕು ಕಾಣಿಸಿಕೊಂಡವರು ಕಡಿಮೆಯಾಗಿದ್ದಾರೆ.

ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ ಅತಿ ಬೇಗನೆ ಬೇರೆ ದೇಶಗಳಿಗೂ ಹಬ್ಬಿದ್ದು, ಕೊರೋನಾ ವೈರಸ್​ ಸಾಂಕ್ರಾಮಿಕ ರೋಗವು ನಿರ್ಣಾಯಕ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ABOUT THE AUTHOR

...view details