ಬೀಜಿಂಗ್:ಚೀನಾದಲ್ಲಿ 15 ಹೊಸ ಲಕ್ಷಣರಹಿತ (asymptomatic) ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಒಟ್ಟು 836 ಲಕ್ಷಣರಹಿತ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಹೆಚ್‌ಸಿ)ದ ಪ್ರಕಾರ, ಶುಕ್ರವಾರದವರೆಗೆ 63 ವಿದೇಶಿಗರು, ಸೇರಿದಂತೆ ಒಟ್ಟು 836 ಲಕ್ಷಣರಹಿತ ಪ್ರಕರಣಗಳು ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿವೆ.
ಈ ರೋಗಲಕ್ಷಣಗಳಿಲ್ಲದ ಪ್ರಕರಣಗಳು ವೈರಸ್ ಹುಟ್ಟಿದ ಕೇಂದ್ರಗಳಾದ ಹುಬೈ ಪ್ರಾಂತ್ಯ ಮತ್ತು ಅದರ ರಾಜಧಾನಿ ವುಹಾನ್ನಿಂದ ವರದಿಯಾಗುತ್ತಿವೆ. ಅಲ್ಲಿ ಕಳೆದ 35 ದಿನಗಳವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ ಎಂದು ಸ್ಥಳೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಪ್ರಾಂತ್ಯದಲ್ಲಿ ಲಾಕ್‌ಡೌನ್ ಸಡಿಲಿಸಲಾಗಿದ್ದು, ಕಳೆದ ತಿಂಗಳಿನಿಂದ ಕಚೇರಿಗಳು, ವ್ಯಾಪಾರ ಮತ್ತು ಕೈಗಾರಿಕೆಗಳನ್ನು ತೆರೆಯಲಾಗಿದೆ. ಇಲ್ಲಿ ಜನಜೀವನೆ ಸಹಜ ಸ್ಥಿತಿಯತ್ತ ಮರಳುತ್ತಿದೆ.