ಕರ್ನಾಟಕ

karnataka

ETV Bharat / international

ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ: ಸತ್ಯವನ್ನು ಬದಲಾಯಿಸಲಾಗದು- ಭಾರತ - India rejects china invented names

ಈಗಾಗಲೇ ಅರುಣಾಚಲ ಪ್ರದೇಶಕ್ಕೆ ಚೀನಿ ಭಾಷೆಯಲ್ಲಿ 'ಝಂಗ್ನಾನ್‌' ಎಂದು ಹೆಸರಿಟ್ಟು 2017ರಲ್ಲಿ ಅಲ್ಲಿನ ಆರು ಸ್ಥಳಗಳಿಗೆ ನೂತನ ಹೆಸರುಗಳನ್ನು ಇಟ್ಟಿದ್ದ ಚೀನಾ ಈಗ ಮತ್ತೆ 15 ಸ್ಥಳಗಳಿಗೆ ಮರುನಾಮಕರಣ ಮಾಡಿದೆ.

China renames 15 places in Arunachal Pradesh
ಚೀನಾ-ಭಾರತ

By

Published : Dec 31, 2021, 7:45 AM IST

ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ, ದೇಶದ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಹೊಸ ಹೆಸರಿಟ್ಟು ಕ್ಯಾತೆ ತೆಗೆದಿದೆ. ಈ ಮುಖೇನ ಮತ್ತೆ ತನ್ನ ಸಾಮ್ರಾಜ್ಯ ವಿಸ್ತರಣಾ ದಾಹವನ್ನು ಎತ್ತಿ ತೋರಿಸುತ್ತಿದೆ. ಇದೇ ವೇಳೆ, ಭಾರತ ಚೀನಾ ನಡೆಯನ್ನು ಖಂಡಿಸುವುದಾಗಿ ತಿಳಿಸಿದೆ.

1962ರ ಚೀನಾ-ಭಾರತ ಯುದ್ಧ ನಡೆದಾಗಿನಿಂದಲೂ ಅರುಣಾಚಲ ಪ್ರದೇಶವನ್ನು 'ದಕ್ಷಿಣ ಟಿಬೆಟ್' ಎಂದು ಪ್ರತಿಪಾದಿಸುವ ಚೀನಾ ಈಗಾಗಲೇ ಅರುಣಾಚಲ ಪ್ರದೇಶಕ್ಕೆ ಚೀನಿ ಭಾಷೆಯಲ್ಲಿ 'ಝಂಗ್ನಾನ್‌' ಎಂದು ಹೆಸರಿಟ್ಟಿದೆ. ಅಲ್ಲದೇ 2017ರಲ್ಲಿ ಇಲ್ಲಿನ ಆರು ಸ್ಥಳಗಳಿಗೆ ನೂತನ ಹೆಸರುಗಳನ್ನು ಇಟ್ಟಿತ್ತು.

ಟಿಬೆಟಿಯನ್, ರೋಮನ್ ಅಕ್ಷರಗಳಲ್ಲಿ ಹೆಸರು:

ಇದೀಗ ಎಂಟು ವಸತಿ ಪ್ರದೇಶಗಳು (ಗ್ರಾಮಗಳು), ನಾಲ್ಕು ಪರ್ವತಗಳು, ಎರಡು ನದಿಗಳು ಮತ್ತು ಒಂದು ಪರ್ವತ ಮಾರ್ಗ ಸೇರಿ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾದ ಅಕ್ಷರಗಳು, ಟಿಬೆಟಿಯನ್ ಮತ್ತು ರೋಮನ್ ವರ್ಣಮಾಲೆಯಲ್ಲಿ ಮರುನಾಮಕರಣ ಮಾಡಿರುವುದಾಗಿ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ಇದನ್ನು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ಭಾರತದ ರಫೇಲ್​ಗೆ ಟಕ್ಕರ್​ ಕೊಡಲು ಚೀನಾ ನಿರ್ಮಿತ ಯುದ್ಧ ವಿಮಾನ ಖರೀದಿಸಿದ ಪಾಕ್

ಚೀನೀ ಅಧಿಕಾರಿಗಳ ಸಮರ್ಥನೆ:

ಈ ಸ್ಥಳಗಳು ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಇವುಗಳಿಗೆ ಪ್ರಮಾಣಿತ ಹೆಸರುಗಳನ್ನು ನೀಡುವುದು ಚೀನಾದ ಸಾರ್ವಭೌಮ ಹಕ್ಕು ಹಾಗೂ ಇದು ಕಾನೂನುಬದ್ಧ ಕ್ರಮವಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚು ಪ್ರದೇಶಗಳಿಗೆ ಮರುನಾಮಕರಣ ಮಾಡಲಾಗುವುದು ಎಂದು ಚೀನಾ ಟಿಬೆಟಾಲಜಿ ಸಂಶೋಧನಾ ಕೇಂದ್ರದ ತಜ್ಞ ಲಿಯಾನ್ ಕ್ಸಿಯಾಂಗ್ಮಿನ್ ಸಮರ್ಥಿಸಿಕೊಂಡಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಚೈನೀಸ್ ಬಾರ್ಡರ್‌ಲ್ಯಾಂಡ್ ಸ್ಟಡೀಸ್‌ನ ಮತ್ತೊಬ್ಬ ಅಧಿಕಾರಿ ಜಾಂಗ್ ಯೋಂಗ್‌ಪಾನ್, "ಈ ಪ್ರದೇಶದಲ್ಲಿ ಸ್ಥಳಗಳನ್ನು ಹೆಸರಿಸುವ ಹಕ್ಕು ಚೀನಾಕ್ಕೆ ಸೇರಿರಬೇಕು" ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಅಂಗ:

ಚೀನಾದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, "ಅರುಣಾಚಲ ಪ್ರದೇಶ ರಾಜ್ಯವು ಭಾರತದಿಂದ ಬೇರ್ಪಡಿಸಲಾಗದ ಭಾಗ. ಅದು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. ಆವಿಷ್ಕರಿಸಿದ ಹೆಸರುಗಳನ್ನು ಇಡುವುದರಿಂದ ಸತ್ಯವನ್ನು ಬದಲಾಯಿಸಲಾಗುವುದಿಲ್ಲ" ಎಂದು ತಿರುಗೇಟು ನೀಡಿದೆ.

ABOUT THE AUTHOR

...view details