ಹೈದರಾಬಾದ್: ಭಾರತ ಮತ್ತು ಚೀನಾ ನಡುವಿನ ಕಮಾಂಡರ್ ಮಟ್ಟದ ಚರ್ಚೆಯ ನಂತರ ಜಂಟಿ ಹೇಳಿಕೆಯ ಅದೇ ದಿನ, ಶಂಕಿತ ಚೀನೀ ಮೂಲದ ಟ್ವಿಟರ್‌ವೊಂದು ಕಳೆದ ವರ್ಷ ಗಾಲ್ವಾನ್‌ನಲ್ಲಿ ಭಾರತ ಮತ್ತು ಚೀನಾದ ಭದ್ರತಾ ಪಡೆಗಳ ನಡುವಿನ ಘರ್ಷಣೆಯದ್ದು ಎಂದು ಹೇಳಿಕೊಂಡ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
2020ರ ಗಲ್ವಾನ್ ಸಂಘರ್ಷದ ಅಪರೂಪದ ವಿಡಿಯೋ ಬಿಡುಗಡೆ ಮಾಡಿದ ಚೀನಾ..!
ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ಸೈನಿಕರ ನಡುವೆ ನಡೆದಿದ್ದ ಘರ್ಷಣೆ ಸಂಬಂಧ ಚೀನಾದ ಟ್ವಿಟರ್ ಖಾತೆಯೊಂದರಲ್ಲಿ ಸಂಘರ್ಷದ್ದೇ ಎಂದು ಹೇಳಿಕೊಂಡು ವಿಡಿಯೋವನ್ನು ಬಿಡುಗಡೆ ಮಾಡಿದೆ.
ಎರಡು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ಪಿಎಲ್‌ಎ ಸೈನಿಕರ ಸಂಬಂಧಿಕರ ಸಂದರ್ಶನದ ಆಯ್ದ ಭಾಗಗಳು ಇದರೊಂದಿಗೆ ಸೇರಿಸಲಾಗಿದೆ ಎಂದು ಟ್ವೀಟ್ ಮಾಡಿದೆ. ಪಿಎಲ್‌ಎ ಹುತಾತ್ಮರ ಕುಟುಂಬದ ಸಂದರ್ಶನದ ಆಯ್ದ ಭಾಗಗಳು, ಗಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ಸೈನಿಕರ ಘರ್ಷಣೆಯ ತುಣುಕುಗಳು ವಿಡಿಯೋದಲ್ಲಿ ಇವೆ.
ಕಳೆದ ವರ್ಷ ಜೂನ್ 15 ರಂದು ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಟ್ವಿಟರ್‌ನಲ್ಲಿ ಹಾಕಿರುವ ಚಿತ್ರದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೀಪಲ್ ಲಿಬರೇಷನ್ ಆರ್ಮಿ- ಪಿಎಲ್‌ಎ ಪಡೆಗಳು ಗಾಲ್ವಾನ್ ನದಿಯ ಆಳವಿಲ್ಲದ ನೀರನ್ನು ದಾಟಲು ಪ್ರಯತ್ನಿಸುತ್ತಿವೆ. ನೆರೆಯ ಎರಡು ದೇಶಗಳು ಕಳೆದ ಶನಿವಾರವಷ್ಟೇ12 ನೇ ಸುತ್ತಿನ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದ್ದವು.