ಕರ್ನಾಟಕ

karnataka

ETV Bharat / international

ಮ್ಯಾನ್ಮಾರ್ ಪರಿಸ್ಥಿತಿಯ ಕುರಿತು ವದಂತಿ ನಿರಾಕರಿಸಿದ ಚೀನಾ - ಮ್ಯಾನ್ಮಾರ್ ಬಿಕ್ಕಟ್ಟು

ಮ್ಯಾನ್ಮಾರ್‌ನ ಪರಿಸ್ಥಿತಿಯ ಕುರಿತು ಚೀನಾದ ವದಂತಿಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ನಿರಾಕರಿಸಿದ್ದು, ಇದು ಚೀನಾ-ಮ್ಯಾನ್ಮಾರ್ ಸಂಬಂಧ ಮತ್ತು ಸ್ನೇಹವನ್ನು ನಾಶಮಾಡುವ ಮತ್ತು ಪ್ರಚೋದಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

myanmar
myanmar

By

Published : Feb 18, 2021, 7:26 PM IST

ಬೀಜಿಂಗ್ (ಚೀನಾ):ಮ್ಯಾನ್ಮಾರ್‌ನ ಪರಿಸ್ಥಿತಿ ಬಗ್ಗೆ ಚೀನಾದ ಕುರಿತಾಗಿರುವ ವದಂತಿಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ನಿರಾಕರಿಸಿದ್ದಾರೆ. ಇದು ಕೇವಲ ಇಂಟರ್ನೆಟ್ ವದಂತಿಗಳಾಗಿದ್ದು, ಬೇರೇನೂ ಅಲ್ಲ ಎಂದು ಹುವಾ ಚುನೈಂಗ್ ಹೇಳಿದ್ದಾರೆ.

ಇದು ಚೀನಾ-ಮ್ಯಾನ್ಮಾರ್ ಸಂಬಂಧ ಮತ್ತು ಸ್ನೇಹವನ್ನು ನಾಶಮಾಡುವ ಮತ್ತು ಪ್ರಚೋದಿಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಮ್ಯಾನ್ಮಾರ್‌ನ ಪರಿಸ್ಥಿತಿಯ ಪ್ರಶ್ನೆಗೆ ಉತ್ತರಿಸುವಾಗ ಅವರು ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಚೀನಾ ಮ್ಯಾನ್ಮಾರ್‌ನ ಸ್ನೇಹಪರ ನೆರೆಯ ದೇಶವಾಗಿದೆ. ಮ್ಯಾನ್ಮಾರ್‌ನ ಎಲ್ಲಾ ಪಕ್ಷಗಳು ಜನರ ಆಕಾಂಕ್ಷೆ ಮತ್ತು ಹಿತಾಸಕ್ತಿಗಳಿಗೆ ಮೊದಲ ಸ್ಥಾನವನ್ನು ನೀಡುತ್ತವೆ. ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನೊಳಗಿನ ಸಂಭಾಷಣೆಯ ಮೂಲಕ ಪರಿಸ್ಥಿತಿಗಳನ್ನು ನಿಭಾಯಿಸುತ್ತವೆ ಮತ್ತು ರಾಜಕೀಯ ಹಾಗೂ ಸಾಮಾಜಿಕ ಸ್ಥಿರತೆಯನ್ನು ಕಾಪಾಡುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಹುವಾ ಹೇಳಿದ್ದಾರೆ.

"ಚೀನಾದ ಉದ್ಯಮಗಳು ಮತ್ತು ನಾಗರಿಕರು ಮ್ಯಾನ್ಮಾರ್​ನ ರಾಷ್ಟ್ರೀಯ ಅಭಿವೃದ್ಧಿ ಮತ್ತು ಚೀನಾ-ಮ್ಯಾನ್ಮಾರ್ ಸ್ನೇಹಕ್ಕಾಗಿ ಸಹಕರಿಸಿದ್ದಾರೆ. ಮ್ಯಾನ್ಮಾರ್​ನಲ್ಲಿ ಸಂಬಂಧಿತ ಪಕ್ಷಗಳು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details