ಕರ್ನಾಟಕ

karnataka

ETV Bharat / international

ಚಂದಿರನ ಅಂಗಳಕ್ಕೆ ತೆರಳಲು ಚೀನಾ ಸಜ್ಜು; ಶುರುವಾಗಿದೆ ಲಾಂಗ್ ಮಾರ್ಚ್-5 ಮಿಷನ್ - ಚೀನಾ ಬೃಹತ್​ ರಾಕೆಟ್ ತಯಾರಿ

ಚೀನಾವು ಇತರ ದೇಶಗಳೊಂದಿಗೆ ಬಾಹ್ಯಾಕಾಶ ಉದ್ದೇಶದ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಆದರೂ ಯುಎಸ್ ಕಾನೂನು ಇನ್ನೂ ಚೀನಾಗೆ ನಾಸಾದೊಂದಿಗಿನ ಸಹಯೋಗವನ್ನು ತಡೆಹಿಡಿದಿದ್ದು, ಚೀನಾವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ವಲಯದೊಂದಿಗೆ ಪಾಲುದಾರಿಕೆ ಮಾಡುವುದನ್ನು ತಪ್ಪಿಸಿದೆ.

china
china

By

Published : Nov 17, 2020, 5:22 PM IST

ಬೀಜಿಂಗ್(ಚೀನಾ):ಮೊದಲ ಬಾರಿಗೆ ಚಂದ್ರನಿಂದ ವಸ್ತುಗಳನ್ನು ಮರಳಿ ತರುವ ಉದ್ದೇಶದಿಂದ ಚೀನಾ ಬೃಹತ್​ ರಾಕೆಟ್​ ಒಂದನ್ನು ತಯಾರಿಸುತ್ತಿದೆ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಒಂದು ಉದ್ದೇಶದೊಂದಿಗೆ ಚೀನಾ ಮೊದಲ ಹೆಜ್ಜೆ ಇಟ್ಟಿದೆ.

ಲಾಂಗ್ ಮಾರ್ಚ್-5 ಹೆಸರಿನ ಈ ಮಿಷನ್ ಮುಂದಿನ ವಾರದ ಆರಂಭದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಚಂದ್ರನ ಮೇಲೆ ಲ್ಯಾಂಡರ್ ಅನ್ನು ಇರಿಸಿ ಅದರ ಮೇಲ್ಮೈಯಿಂದ ಕೆಳಗೆ 2 ಮೀಟರ್ (ಸುಮಾರು 7 ಅಡಿ) ಕೊರೆಯುತ್ತದೆ. ಅಲ್ಲಿಂದ ಭೂಮಿಗೆ ತರಬೇಕಾದ ಕಲ್ಲುಗಳು ಮತ್ತು ಇತರ ಭಗ್ನಾವಶೇಷಗಳನ್ನು ಚಂದ್ರನಿಂದ ಕೊರೆದು ತೆಗೆಯುತ್ತದೆ. 1960 ಮತ್ತು 1970 ರ ಅಮೆರಿಕನ್ ಮತ್ತು ರಷ್ಯಾದ ಕಾರ್ಯಾಚರಣೆಗಳ ಬಳಿಕ ಇದೀಗ ಚೀನಾ ವಿಜ್ಞಾನಿಗಳು ಮತ್ತೆ ಈ ಕಾರ್ಯಕ್ಕೆ ಕೈ ಹಾಕಿದ್ದು, ಇದು ಚಂದ್ರನಿಂದ ತರಿಸುವ ವಸ್ತುಗಳನ್ನು ಅಧ್ಯಯನ ಮಾಡಲು ಇನ್ನಷ್ಟು ಸಹಕಾರಿಯಾಗಿದೆ.

ಈ ಮಿಷನ್ ಚೀನಾದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳ ಪೈಕಿ ಒಂದಾಗಿದೆ. ಏಕೆಂದರೆ ಅದರ ಬಾಹ್ಯಾಕಾಶ ಕಾರ್ಯಕ್ರಮವು 2003 ರಲ್ಲಿ ಮೊದಲ ಬಾರಿಗೆ ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವುದರಿಂದ ಇಲ್ಲಿಯವರೆಗೆ ಮುಂದುವರೆದಿದೆ. ಯು.ಎಸ್ ಮತ್ತು ರಷ್ಯಾದ ಬಳಿಕ ಮಾನವನನ್ನು ಬಾಹ್ಯಾಕಾಶಕ್ಕೆ ಸೇರಿಸಿದ ಮೂರನೇ ರಾಷ್ಟ್ರವಾಗಿ ಚೀನಾ ನಿಲ್ಲುತ್ತದೆ.

ಚೀನಾ ಪ್ರಸ್ತುತ ಮಂಗಳನ ಅಂಗಳಕ್ಕೆ ಹೋಗುವ ಹೊಸ ಯೋಜನೆಯನ್ನು ಅದು ಹೊಂದಿದೆ. ಅದರ ಜೊತೆಗೆ ಚಂದ್ರನ ದೂರದ ಬದಿಯಲ್ಲಿರುವ ರೋವರ್​ ಸಹಾಯದಿಂದ ಚಂದ್ರನ ಮೇಲ್ಮೈಗೆ ವಿಕಿರಣದ ಒಡ್ಡುವಿಕೆಯಿಂದ ಉಂಟಾಗುವ ಚಂದ್ರನ ಮೊದಲ ಪೂರ್ಣ ಪ್ರಮಾಣದ ಅಳತೆಗಳನ್ನು ಇದು ಒದಗಿಸುತ್ತದೆ. ಇದು ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಲು ಯೋಜಿಸುವ ಯಾವುದೇ ದೇಶಕ್ಕೆ ಪ್ರಮುಖವಾದ ಮಾಹಿತಿಯನ್ನು ನೀಡುತ್ತದೆ.

ಚೀನಾವು ಇತರ ದೇಶಗಳೊಂದಿಗೆ ಬಾಹ್ಯಾಕಾಶ ಉದ್ದೇಶದ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಆದರೂ ಯುಎಸ್ ಕಾನೂನು ಇನ್ನೂ ಚೀನಾಗೆ ನಾಸಾದೊಂದಿಗಿನ ಸಹಯೋಗವನ್ನು ತಡೆಹಿಡಿದಿದ್ದು, ಚೀನಾವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ವಲಯದೊಂದಿಗೆ ಪಾಲುದಾರಿಕೆ ಮಾಡುವುದನ್ನು ತಪ್ಪಿಸಿದೆ. ಇದು ಚೀನಾಗೆ ತನ್ನ ಸ್ವಂತ ಬಾಹ್ಯಾಕಾಶ ವಲಯದಲ್ಲಿಯೇ ಕೆಲಸ ಮಾಡಲು ಪ್ರೇರೇಪಿಸಿದೆ. ಅಲ್ಲದೇ ಬಾಹ್ಯಾಕಾಶದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಏಷ್ಯಾದ ರಾಷ್ಟ್ರಗಳಲ್ಲಿ ಜಪಾನ್ ಮತ್ತು ಭಾರತದೊಂದಿಗೆ ಸ್ಥಿರ ಸ್ಪರ್ಧೆಯಲ್ಲಿ ತೊಡಗಿರುವ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಸಹಾ ಪ್ರೇರೇಪಿಸಿದೆ.

ABOUT THE AUTHOR

...view details