ಕರ್ನಾಟಕ

karnataka

ಆ ಋಣ ತೀರಿಸಲು ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದ ಚೀನಾ

ಕೊರೊನಾ ಸೋಂಕಿನಿಂದಾಗಿ ಚೀನಾ ಸಂಕಷ್ಟದಲ್ಲಿದ್ದಾಗ ಭಾರತವು ವೈದ್ಯಕೀಯ ನೆರವು ಒದಗಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಚೀನಾ, ಮಾರಣಾಂರಿಕ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿದೆ.

By

Published : Mar 26, 2020, 7:32 AM IST

Published : Mar 26, 2020, 7:32 AM IST

China offers to help India fight,ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದ ಚೀನಾ
ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದ ಚೀನಾ

ನವದೆಹಲಿ: ಕೊವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತ ನೀಡಿದ ಬೆಂಬಲಕ್ಕೆ ಚೀನಾ ಬುಧವಾರ ಧನ್ಯವಾದ ಅರ್ಪಿಸಿದೆ. ಅದರ ಋಣವಾಗಿ ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ ಮಾಡಲು ಮುಂದಾಗಿದೆ.

ನವದೆಹಲಿಯ ಚೀನಾ ರಾಯಭಾರ ಕಚೇರಿಯ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೌನ್ಸಿಲರ್ ಜಿ ರೋಂಗ್, "ಚೀನಾದ ಉದ್ಯಮಗಳು ಭಾರತಕ್ಕೆ ದೇಣಿಗೆ ನೀಡಲು ಪ್ರಾರಂಭಿಸಿವೆ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಾಗಿರುತ್ತೇವೆ" ಎಂದಿದ್ದಾರೆ.

ಚೀನಾ ಮತ್ತು ಭಾರತ, ಉತ್ತಮ ಸಂವಹನ ಮತ್ತು ಸಹಕಾರವನ್ನು ಕಾಪಾಡಿಕೊಂಡಿವೆ. ಕಷ್ಟದ ಸಮಯದಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಪರಸ್ಪರ ಬೆಂಬಲವನ್ನು ನೀಡಿವೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ಇದುವರೆಗೆ 3,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 81,000 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸೋಂಕು ಪೀಡಿತ ವುಹಾನ್ ನಗರಕ್ಕೆ ಮಾಸ್ಕ್​, ಕೈಗವಸುಗಳು ಮತ್ತು ಇತರ ತುರ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸುಮಾರು 15 ಟನ್ ವೈದ್ಯಕೀಯ ಸಹಾಯವನ್ನು ಭಾರತ ಕಳುಹಿಸಿತ್ತು.

ಭಾರತ ಚೀನಾಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಚೀನಾದ ಹೋರಾಟವನ್ನು ಭಾರತೀಯರು ವಿವಿಧ ರೀತಿಯಲ್ಲಿ ಬೆಂಬಲಿಸಿದ್ದಾರೆ. ಅದಕ್ಕಾಗಿ ನಾವು ಮೆಚ್ಚುಗೆ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.

ಭಾರತೀಯರು ಈ ವೈರಸ್ ವಿರುದ್ಧದ ಯುದ್ಧದಲ್ಲಿ ಗೆಲ್ಲುತ್ತಾರೆ ಎಂದು ನಾವು ನಂಬುತ್ತೇವೆ. ಚೀನಾವು ಭಾರತ ಮತ್ತು ಇತರ ದೇಶಗಳೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮುಂದುವರೆಸುತ್ತದೆ. ಜಿ-20 ಮತ್ತು ಬ್ರಿಕ್ಸ್‌ನಂತಹ ವೇದಿಕೆಗಳಲ್ಲಿ ಸಹಕಾರವನ್ನು ಹೆಚ್ಚಿಸುತ್ತದೆ. ಜಾಗತಿಕ ಸವಾಲುಗಳನ್ನು ಪರಿಹರಿಸಲು ನಮ್ಮ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ನೀಡುತ್ತೇವೆ. ಎಲ್ಲಾ ಮನುಕುಲದ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಾವು ಉತ್ತೇಜಿಸುತ್ತೇವೆ ಎಂದು ಜಿ ರೋಂಗ್ ಹೇಳಿದ್ದಾರೆ.

ABOUT THE AUTHOR

...view details