ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧದ ಸುದೀರ್ಘ ಹೋರಾಟಕ್ಕೆ ನಾವು ಸಿದ್ಧರಾಗಿರಬೇಕು : ಚೀನಾ - ಪಾಕ್​ ಆತ್ಮಾಹುತಿ ದಾಳಿ

ಶುಕ್ರವಾರದ ದಾಳಿಯ ಹೊಣೆ ಹೊತ್ತಿರುವ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಉಲ್ಲೇಖಿಸಿ, ಗ್ಲೋಬಲ್ ಟೈಮ್ಸ್ ಸಂಪಾದಕೀಯವು ಬೆಟ್ಟದ ಗಡಿ ಪ್ರಾಂತ್ಯವಾದ ಬಲೂಚಿಸ್ತಾನವು ಚೀನಾದ ನಾಗರಿಕರಿಗೆ ಅತ್ಯಂತ ಅಸುರಕ್ಷಿತ ಪ್ರದೇಶವಾಗಿದೆ. ಹಲವು ವರ್ಷಗಳಿಂದೀಚೆಗೆ ಭಯೋತ್ಪಾದಕ ದಾಳಿಯ ಕೇಂದ್ರವಾಗಿದೆ ಎಂದು ಹೇಳಿದೆ..

china-pak
china-pak

By

Published : Aug 21, 2021, 9:17 PM IST

ಹೈದರಾಬಾದ್ :ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧದ ದೀರ್ಘಾವಧಿಯ ಹೋರಾಟಕ್ಕೆ ಬೀಜಿಂಗ್ ಸನ್ನದ್ಧವಾಗಿರಬೇಕು ಎಂದು ಚೀನಾ ತನ್ನ ಕರೆ ನೀಡಿದೆ. ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಚೀನಾದ ಶತ್ರುಗಳು ಎಂದೂ ಹೇಳಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಸರ್ಕಾರದೊಂದಿಗೆ ಚೀನಾ ದೀರ್ಘಕಾಲೀನ ಹೋರಾಟಕ್ಕೆ ಸಿದ್ಧರಾಗಿರಬೇಕು. ಭಯೋತ್ಪಾದನೆಯನ್ನು ಹತ್ತಿಕ್ಕಲು ಚೀನಾ-ಪಾಕಿಸ್ತಾನ ಸರ್ಕಾರವನ್ನು ದೃಢವಾಗಿ ಬೆಂಬಲಿಸಬೇಕು ಎಂದು ಚೀನಾ ಪ್ರತಿಕ್ರಿಯಿಸಿದೆ.

ದಕ್ಷಿಣ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟಿಸಿದ್ದರಿಂದ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ತಿಂಗಳು ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 9 ಮಂದಿ ಚೀನಿಯರು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದರು.

ಗ್ವಾದರ್ ಪ್ರಾಂತ್ಯವು, ನೀರು ಮತ್ತು ವಿದ್ಯುತ್‌ನ ತೀವ್ರ ಕೊರತೆ ಮತ್ತು ಜೀವನೋಪಾಯದ ಬೆದರಿಕೆಗಳ ವಿರುದ್ಧದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ ಎಂದು ಚೀನಿಯರು ಆರೋಪಿಸಿದ್ದಾರೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸೇರಿ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಚೀನಾದ ತಜ್ಞರು ಹಾಗೂ ಕಾರ್ಮಿಕರು ಗ್ವಾದರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಸ ಮಾಡ್ತಿದ್ದಾರೆ.

ಶುಕ್ರವಾರದ ದಾಳಿಯ ಹೊಣೆ ಹೊತ್ತಿರುವ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಉಲ್ಲೇಖಿಸಿ, ಗ್ಲೋಬಲ್ ಟೈಮ್ಸ್ ಸಂಪಾದಕೀಯವು ಬೆಟ್ಟದ ಗಡಿ ಪ್ರಾಂತ್ಯವಾದ ಬಲೂಚಿಸ್ತಾನವು ಚೀನಾದ ನಾಗರಿಕರಿಗೆ ಅತ್ಯಂತ ಅಸುರಕ್ಷಿತ ಪ್ರದೇಶವಾಗಿದೆ. ಹಲವು ವರ್ಷಗಳಿಂದೀಚೆಗೆ ಭಯೋತ್ಪಾದಕ ದಾಳಿಯ ಕೇಂದ್ರವಾಗಿದೆ ಎಂದು ಹೇಳಿದೆ.

ಬಲೂಚಿಸ್ತಾನದಲ್ಲಿ ವಾಸಿಸುತ್ತಿರುವ ಜನರು ಪಾಕಿಸ್ತಾನದ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಭಯೋತ್ಪಾದಕರು ಪಾಕಿಸ್ತಾನ ಸರ್ಕಾರದ ಮೇಲೆ ತಪ್ಪಾದ ಅಭಿಪ್ರಾಯ ಮೂಡಿಸಲು, ಚೀನಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಪಾಕ್​ನಲ್ಲಿ ಚೀನಾ ಪ್ರಜೆಗಳನ್ನು ಗುರಿಯಾಗಿಸಿ ಆತ್ಮಾಹುತಿ ದಾಳಿ: ಇಬ್ಬರು ಮಕ್ಕಳು ಸೇರಿ ಐವರು ಸಾವು

ದಾಳಿಯ ಕುರಿತು ಪಾಕಿಸ್ತಾನವು ಸಮಗ್ರ ತನಿಖೆ ನಡೆಸಬೇಕು ಮತ್ತು ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಚೀನಾ ರಾಯಭಾರ ಕಚೇರಿ ಒತ್ತಾಯಿಸಿದೆ. ಪಾಕಿಸ್ತಾನ ಎಲ್ಲಾ ಹಂತಗಳಲ್ಲಿ ಸಂಬಂಧಿತ ಇಲಾಖೆಗಳನ್ನು ಪ್ರಾಯೋಗಿಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಬಲಪಡಿಸಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳಬೇಕೆಂದು ಚೀನಾ ಒತ್ತಾಯಿಸಿದೆ.

ಪಾಕಿಸ್ತಾನದಲ್ಲಿ ನಿರಂತರವಾಗಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು, ಹಲವಾರು ಚೀನಿ ನಾಗರಿಕರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details