ಕರ್ನಾಟಕ

karnataka

ETV Bharat / international

ಮಂಗಳನ ಅಂಗಳ ತಲುಪಲು ಪೈಪೋಟಿ: ಚೀನಾದಿಂದ ಟಿಯಾನ್ವೆನ್ -1 ಉಡಾವಣೆ - ಮಂಗಳ ಗ್ರಹದತ್ತ ಚೀನಾ

ಚೀನಾ ತನ್ನ ಮಹತ್ವಾಕಾಂಕ್ಷೆಯ ಮಂಗಳ ಗ್ರಹದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಹೈನಾನ್ ದ್ವೀಪದ ಉಡಾವಣಾ ತಾಣದಿಂದ ಟಿಯಾನ್ವೆನ್ -1 ಉಪಗ್ರಹವನ್ನು 'ಲಾಂಗ್ ಮಾರ್ಚ್ - 5 ಕ್ಯಾರಿಯರ್ ರಾಕೆಟ್'‌ನಲ್ಲಿ ಕಳುಹಿಸಿದೆ.

china mars
china mars

By

Published : Jul 23, 2020, 3:30 PM IST

ಬೀಜಿಂಗ್:ಮಂಗಳ ಗ್ರಹದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸುವಲ್ಲಿ ಅಮೆರಿಕದ ದಿಟ್ಟ ಪ್ರಯತ್ನಕ್ಕೆ ಸೆಡ್ಡು ಹೊಡೆಯಲು ಚೀನಾ ಮುಂದಾಗಿದೆ.

ಹೈನಾನ್ ದ್ವೀಪದ ಉಡಾವಣಾ ತಾಣದಿಂದ ಟಿಯಾನ್ವೆನ್ -1 ಅನ್ನು ಲಾಂಗ್ ಮಾರ್ಚ್ -5 ಕ್ಯಾರಿಯರ್ ರಾಕೆಟ್‌ನಲ್ಲಿ ಉಡಾಯಿಸಲಾಗಿದೆ. ಎಲ್ಲವೂ ಯೋಜಿಸಿದಂತೆ ಆದಲ್ಲಿ ಏಳು ತಿಂಗಳಲ್ಲಿ ಉಪಗ್ರಹ ಮಂಗಳ ಗ್ರಹವನ್ನು ತಲುಪಲಿದೆ.

ಇದು ಮಂಗಳ ಗ್ರಹ ತಲುಪಲು ಚೀನಾದ ಮೊದಲ ಪ್ರಯತ್ನವಲ್ಲ. 2011ರಲ್ಲಿ ರಷ್ಯಾದೊಂದಿಗಿನ ಕಾರ್ಯಾಚರಣೆಯಿಂದ ಕಜಕಿಸ್ತಾನ್‌ನಿಂದ ಚೀನಾ ರಾಕೆಟ್ ಉಡಾವಣೆ ಮಾಡಿತ್ತು. ಆದರೆ ಈ ನೌಕೆ ಭೂಮಿಯ ಕಕ್ಷೆಯಿಂದ ಹೊರಹೋಗಲು ವಿಫಲವಾಗಿತ್ತು.

ಮುಂದಿನ ವಾರ ಫ್ಲೋರಿಡಾದ ಕೇಪ್ ಕೆನವೆರಲ್​ನಿಂದ ತನ್ನ ಅತ್ಯಾಧುನಿಕ ಮಾರ್ಸ್ ರೋವರ್ ಪರ್ಸವೆರೆನ್ಸ್ ಅನ್ನು ಪ್ರಾರಂಭಿಸುವ ಗುರಿಯನ್ನು ಅಮೆರಿಕ ಹೊಂದಿದೆ.

ABOUT THE AUTHOR

...view details