ಕರ್ನಾಟಕ

karnataka

By

Published : Aug 27, 2020, 9:45 AM IST

ETV Bharat / international

ನಿರ್ಬಂಧಿತ ವಾಯುಪ್ರದೇಶದಲ್ಲಿ  ಅಮೆರಿಕ ಬೇಹುಗಾರಿಕಾ ವಿಮಾನ:  ಚೀನಾ ಎಚ್ಚರಿಕೆ

ಮಂಗಳವಾರ ಚೀನಾದ ದಕ್ಷಿಣ ಸಮುದ್ರ ವ್ಯಾಪ್ತಿಯ ನಿರ್ಬಂಧಿತ ವಾಯುಪ್ರದೇಶದಲ್ಲಿ ಅಮೆರಿಕ ಬೇಹುಗಾರಿಕಾ ವಿಮಾನ ಹಾರಾಟ ನಡೆಸಿದೆ. ಇದು ಚೀನಾವನ್ನ ಕೆರಳಿಸಿದ್ದು, ಅಮೆರಿಕಕ್ಕೆ ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಿದೆ.

China fires 2 missiles into South China Sea to 'warn' USChina fires 2 missiles into South China Sea to 'warn' US
ದಕ್ಷಿಣ ಚೀನಾ ಸಮುದ್ರಕ್ಕೆ ಕ್ಷಿಪಣಿಗಳನ್ನು ಹಾರಿಸಿ ಯುಎಸ್ ಗೆ ಚೀನ ವಾರ್ನಿಂಗ್​

ಬೀಜಿಂಗ್(ಚೀನಾ):ಅಮೆರಿಕ ಪತ್ತೇದಾರಿ ವಿಮಾನವು ತನ್ನ ಸೈನ್ಯದ ವಾಯುಪ್ರದೇಶಕ್ಕೆ ನುಸುಳಿದೆ ಎಂಬ ಮಾಹಿತಿ ತಿಳಿದ ಚೀನಾ ಯುಎಸ್​ಗೆ ಎಚ್ಚರಿಕೆ ನೀಡಿದೆ. ಇದೇ ವೇಳೆ, ಅಮೆರಿಕ ಬೇಹುಗಾರಿಕಾ ವಿಮಾನ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಮಂಗಳವಾರ ಚೀನಾದ ಮಿಲಿಟರಿ ಡ್ರಿಲ್ ನಿರ್ಬಂಧಿತ ವಾಯುಪ್ರದೇಶಕ್ಕೆ ಪ್ರವೇಶಿಸುವಾಗ ಯುಎಸ್ ವಾಯುಪಡೆಯ ಆರ್ಸಿ -135 ಎಸ್ ವಿಚಕ್ಷಣ ವಿಮಾನವು ದಕ್ಷಿಣ ಚೀನಾ ಸಮುದ್ರದಾದ್ಯಂತ ಹಾರಾಟ ನಡೆಸಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಆರೋಪಿಸಿತ್ತು.

"ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಆಗಾಗ ಒಳ ಬರುವ ಯುಎಸ್ ಯುದ್ಧ ವಿಮಾನಗಳು ಮತ್ತು ಮಿಲಿಟರಿ ಹಡಗುಗಳು ತರುವ ಸಂಭಾವ್ಯ ಅಪಾಯಗಳಿಗೆ ಇದು ಚೀನಾದ ಪ್ರತಿಕ್ರಿಯೆ" ಎಂದು ಸೌತ್​ ಏಷಿಯಾ ಮಾರ್ನಿಂಗ್​ ಪೋಸ್ಟ್​ ಮೂಲವು ಉಲ್ಲೇಖಿಸಿದೆ. ಜೊತೆಗೆ "ನೆರೆಯ ರಾಷ್ಟ್ರಗಳು ಬೀಜಿಂಗ್ ಗುರಿಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ." ಎಂದು ಸ್ಪಷ್ಟಪಡಿಸಿದೆ.

ABOUT THE AUTHOR

...view details