ಕರ್ನಾಟಕ

karnataka

ETV Bharat / international

ಜೈವಿಕ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಪಾಕಿಸ್ತಾನ- ಚೀನಾ ನಡುವೆ ರಹಸ್ಯ ಒಪ್ಪಂದ - ಪಾಕಿಸ್ತಾನ ಚೀನಾ ಯುದ್ಧ ಸಾಮರ್ಥ್ಯ

ಸಂಭಾವಿತ ಜೈವಿಕ ಯುದ್ಧದ ಸಾಮರ್ಥ್ಯಗಳನ್ನು ವಿಸ್ತರಿಸಲು ಪಾಕಿಸ್ತಾನ ಮತ್ತು ಚೀನಾ ರಹಸ್ಯವಾಗಿ ಮೂರು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.

pak china
ಪಾಕಿಸ್ತಾನ ಮತ್ತು ಚೀನಾ

By

Published : Jul 24, 2020, 11:43 AM IST

ಬೀಜಿಂಗ್:ಭಾರತ ಮತ್ತು ಪಾಶ್ಚಿಮಾತ್ಯ ಪ್ರತಿಸ್ಪರ್ಧಿಗಳ ವ್ಯಾಪಕ ದಾಳಿಯ ಸಾಧ್ಯತೆ ಎದುರಿಸಲು ಹಾಗೂ ಸಂಭಾವಿತ ಜೈವಿಕ ಯುದ್ಧದ ಸಾಮರ್ಥ್ಯಗಳನ್ನು ವಿಸ್ತರಿಸಲು ಪಾಕಿಸ್ತಾನ ಮತ್ತು ಚೀನಾ ರಹಸ್ಯವಾಗಿ ಮೂರು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿವೆ ಎಂದು ಕ್ಲಾಕ್ಸನ್ ವರದಿ ಮಾಡಿದೆ.

ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಲ್ಯಾಬ್​ನಿಂದ ಕೊರೊನಾ ವೈರಸ್ ಹೊರಹೊಮ್ಮಿದೆ ಎಂಬ ಊಹಾಪೋಹಗಳ ನಡುವೆ ಇಡೀ ಜಗತ್ತು ಚೀನಾವನ್ನು ಟೀಕಿಸುತ್ತಿದೆ. ಆದರೂ ಹೆಚ್ಚಿನ ತಜ್ಞರು ಈ ಟೀಕೆಯನ್ನು ತಳ್ಳಿಹಾಕಿದ್ದಾರೆ.

ಅದೇ ಲ್ಯಾಬ್ ಪಾಕಿಸ್ತಾನ ಮಿಲಿಟರಿಯ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯೊಂದಿಗೆ (ಡೆಸ್ಟೊ) ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆಂಥೋನಿ ಕ್ಲಾನ್ ಬರೆದಿರುವ ವರದಿ ತಿಳಿಸುತ್ತಿದೆ.

ಈ ಮೂಲಕ ಭಾರತ ಕೆಂಡವನ್ನ ಸೆರಗಿನಲ್ಲಿ ಕಟ್ಟಿಕೊಂಡಂತಾಗಿದೆ. ಎರಡೂ ನೆರೆಯ ರಾಷ್ಟ್ರಗಳು ಅಪಾಯಕಾರಿ ನಿರ್ಧಾರಗಳಿಗೆ ಮುಂದಾಗಿರುವ ಹಿನ್ನೆಲೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.

ABOUT THE AUTHOR

...view details