ಬೀಜಿಂಗ್(ಚೀನಾ): ಇಡೀ ವಿಶ್ವಕ್ಕೆ ಮಾರಕವಾಗಿರುವ ತಾಲಿಬಾನ್ಗೆ ಚೀನಾ ಹಾಗೂ ಪಾಕಿಸ್ತಾನ ಬೇಷರತ್ ಬೆಂಬಲ ಸೂಚಿಸುತ್ತಲೇ ಇವೆ. ಆಫ್ಫನ್ನಲ್ಲಿ ತಾಲಿಬಾನ್ ಸರ್ಕಾರದ ಗುಣಗಾನ ಮಾಡುತ್ತಿರುವ ಡ್ರ್ಯಾಗನ್ ಸರ್ಕಾರ 31 ಮಿಲಿಯನ್ ಡಾಲರ್ ನೆರವು ಘೋಷಿಸಿದೆ.
ಇತ್ತೀಚೆಗಷ್ಟೇ ತಾಲಿಬಾನ್ ನೂತನ ಮಧ್ಯಂತರ ಸರ್ಕಾರ ಘೋಷಿಸಿದ್ದು, ಆಫ್ಘನ್ನಲ್ಲಿ ಸೃಷ್ಟಿಯಾಗಿದ್ದ ಅರಾಜಕತೆ ಕೊನೆಗೊಳಿಸಿದೆ. ಆಡಳಿತ ಮರುಸ್ಥಾಪಿಸಲು ಇದೊಂದು ಅಗತ್ಯಕ್ರಮ. ಅಲ್ಲದೇ, ವಿಶಾಲವಾದ ರಾಜಕೀಯ ರಚನೆ ಮತ್ತು ವಿವೇಕಯುತ ದೇಶೀಯ - ವಿದೇಶಿ ನೀತಿಯನ್ನು ಅನುಸರಿಸುವುದಾಗಿ ತಾಲಿಬಾನ್ ಭರವಸೆ ನೀಡಿದೆ.
ಹೀಗಾಗಿ ತಾಲಿಬಾನ್ ಸರ್ಕಾರಕ್ಕೆ ನಾವು ಬೆಂಬಲ ನೀಡುವುದರ ಜತೆಗೆ ಹಣಕಾಸಿನ ನೆರವು ನೀಡುತ್ತಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹಾಗೂ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.