ಕರ್ನಾಟಕ

karnataka

ETV Bharat / international

ಜೋ ಬೈಡನ್ ಜಯವನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ನಿರಾಕರಿಸಿದ ಚೀನಾ..!

ಚೀನಾ ಮತ್ತು ಅಮೆರಿಕ ನಡುವೆ ದ್ವೇಷ ಮತ್ತಷ್ಟು ಹೆಚ್ಚಾಗುತ್ತಿದ್ದು, ಬೈಡನ್ ಗೆಲುವನ್ನು ಒಪ್ಪಿಕೊಳ್ಳಲು ಚೀನಾ ನಿರಾಕರಿಸಿದೆ.

america china relation
ಅಮೆರಿಕ ಚೀನಾ ಸಂಬಂಧ

By

Published : Nov 9, 2020, 7:37 PM IST

ಬೀಜಿಂಗ್ (ಚೀನಾ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿಜಯವನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಚೀನಾ ನಿರಾಕರಿಸಿದ್ದು, ರಷ್ಯಾ, ಬ್ರೆಜಿಲ್ ಮತ್ತು ಮೆಕ್ಸಿಕೊ ರಾಷ್ಟ್ರಗಳ ಗುಂಪಿಗೆ ಸೇರಿಕೊಂಡಿದೆ.

ಡೊನಾಲ್ಡ್​ ಟ್ರಂಪ್​ ಇನ್ನೂ ಸೋಲನ್ನು ಒಪ್ಪಿಕೊಂಡಿಲ್ಲ. ಕಾನೂನು ಸಮರ ನಡೆಸಲು ಡೊನಾಲ್ಡ್ ಟ್ರಂಪ್ ಸಿದ್ಧತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಚೀನಾ ಜೋ ಬೈಡನ್ ಅವರ ಗೆಲುವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.

ಟ್ರಂಪ್ ಅವರ 'ಅಮೆರಿಕ ಫಸ್ಟ್​'​ ನೀತಿ, ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿದ ಕ್ರಮ, ನ್ಯಾಟೋ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ವಿರೋಧ ಮುಂತಾದ ವಿಚಾರಗಳ ಬಗ್ಗೆ ಕೆಲವು ರಾಷ್ಟ್ರಗಳು ಡೊನಾಲ್ಡ್​ ಟ್ರಂಪ್ ನಿಂತಿದ್ದವು. ಈ ರಾಷ್ಟ್ರಗಳೂ ಬೈಡನ್ ಗೆಲುವನ್ನು ಒಪ್ಪಿಕೊಳ್ಳುತ್ತಿಲ್ಲ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ವಿಜಯವನ್ನು ಘೋಷಿಸಿಕೊಂಡಿದ್ದಾರೆ. ಅಮೆರಿಕದ ಕಾನೂನುಗಳಿಗೆ ಅನುಗುಣವಾಗಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ ಎಂದು ನಮಗೆ ಅರ್ಥವಾಗಿದೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವ್ಯಾಂಗ್​ ವೆನ್​ಬಿನ್ ಹೇಳಿದ್ದಾರೆ.

ಸೋಮವಾರ ಬೀಜಿಂಗ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೋ ಬೈಡನ್​ಗೆ ಚೀನಾ ಅಭಿನಂದನೆ ತಿಳಿಸದಿರುವುದಕ್ಕೆ ಸ್ಪಷ್ಟನೆ ನೀಡಿದರು. ಇದರ ಜೊತೆಗೆ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಮತ್ತು ಅಮೆರಿಕ- ಚೀನಾ ಸಂಬಂಧದ ಬಗ್ಗೆ ಮಾಹಿತಿ ನೀಡಿದರು.

ಇದರ ಜೊತೆಗೆ ಚೀನಾ ಮತ್ತು ಯುಎಸ್ ಸಂಬಂಧವನ್ನು ಬಲಪಡಿಸಬೇಕು. ಪರಸ್ಪರ ಗೌರವದ ಆಧಾರದ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಬೇಕು ಎಂದು ವ್ಯಾಂಗ್​ ವೆನ್​ಬಿನ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details