ಕರ್ನಾಟಕ

karnataka

ETV Bharat / international

ಕೊರೊನಾ ದಾಳಿಗೆ ಚೀನಾದಲ್ಲಿ 169 ಮಂದಿ ಬಲಿ: ಸೋಂಕಿನ ಪ್ರಮಾಣದಲ್ಲಿ ಶೇ 30ರಷ್ಟು ಹೆಚ್ಚಳ - ಚೀನಾ ಕೊರೊನಾ ವೈರಸ್​

ಚೀನಾದಲ್ಲಿ ಕೊರೊನಾ ವೈರಸ್​ಗೆ ಬಲಿಯಾದವರ ಸಂಖ್ಯೆ 169 ಕ್ಕೇರಿದ್ದು, 7,711 ಪ್ರಕರಣಗಳು ವರದಿಯಾಗಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

China corona virus death toll
ಕೊರೊನಾಗೆ ಈವರೆಗೆ ಚೀನಾದಲ್ಲಿ 169 ಮಂದಿ ಬಲಿ

By

Published : Jan 30, 2020, 8:43 AM IST

ಬೀಜಿಂಗ್​:ಮಹಾಮಾರಿ ಕೊರೊನಾ ವೈರಸ್​ನಿಂದ ಮೃತಪಟ್ಟಿರುವ ಸಂಖ್ಯೆ 169 ಕ್ಕೆ ಏರಿದ್ದು, 7,711 ಪ್ರಕರಣಗಳು ವರದಿಯಾಗಿದೆ ಎಂದು ಚೀನಾ ಸರ್ಕಾರ ದೃಢಪಡಿಸಿದೆ.

ಸೋಂಕಿನ ಪ್ರಮಾಣ ಶೇ.30% ರಷ್ಟು ಹೆಚ್ಚಾಗಿದ್ದು, 1,700 ಹೊಸ ಪ್ರಕರಣಗಳು, 4,148 ಹೊಸ ಶಂಕಿತ ಪ್ರಕರಣಗಳು ವರದಿಯಾಗಿದೆ. 1,370 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, 12,167 ಜನರು ಸೋಂಕಿಗೆ ಒಳಗಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ಮೃತಪಟ್ಟ 38 ಮಂದಿಯಲ್ಲಿ ಹುಬೈ ಪ್ರಾಂತ್ಯದಲ್ಲೇ 37 ಸಾವಾಗಿದೆ, 124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

ಸೋಂಕು ತಗುಲಿದ್ದ ಮೂವರು ಜಪಾನಿಯನ್ನರನ್ನು ಚೀನಾದ ವುಹಾನ್​ ನಗರದಿಂದ ದೇಶಕ್ಕೆ ಕರೆತರಲಾಗಿದೆ ಎಂದು ಜಪಾನ್​ನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಭಾರತ, ಅಮೆರಿಕಾ, ಜಪಾನ್​ ಸೇರಿದಂತೆ ಇತರ ರಾಷ್ಟ್ರಗಳು ಚೀನಾದಲ್ಲಿರುವ ತಮ್ಮ ಪ್ರಜೆಗಳನ್ನು ಕರೆತರುವ ಪ್ರಯತ್ನ ಮಾಡುತ್ತಿವೆ. ಆದರೆ ಸದ್ಯ ಜನವರಿ 31 ರಿಂದ ಫೆಬ್ರವರಿ 14 ರವರೆಗೆ ದೆಹಲಿ-ಶಾಂಘೈ ಮಾರ್ಗದಲ್ಲಿ ಏರ್ ಇಂಡಿಯಾ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಇಂಡಿಗೊ ವಿಮಾನಯಾನ ಸಂಸ್ಥೆ ಕೂಡ ಫೆಬ್ರವರಿ 1 ರಿಂದ 20ರ ವರೆಗೆ ಬೆಂಗಳೂರು-ಹಾಂಕಾಂಗ್ ಮಾರ್ಗ ಹಾಗೂ ದೆಹಲಿ-ಚೆಂಗ್ಡು ಮಾರ್ಗದಲ್ಲಿ ತನ್ನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿವೆ.

ABOUT THE AUTHOR

...view details