ತೈಪೆ(ತೈವಾನ್): ಚೀನಾ ಕೇವಲ ಭಾರತದ ಗಡಿಯಲ್ಲಿ ಮಾತ್ರ ಉದ್ಧಟನ ಪ್ರದರ್ಶಿಸುತ್ತಿಲ್ಲ. ಬದಲಾಗಿ ನೆರೆಯ ನೇಪಾಳ, ತೈವಾನ್ ಸೇರಿದಂತೆ ಇತರೆ ನೆರೆಯವರೊಂದಿಗೂ ಕಿರಿಕ್ ಮಾಡಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ತೈವಾನ್‌ಗೆ ಚೀನಾ ಸೇನೆ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ಅಮೆರಿಕಾದ ಉನ್ನತ ಮಟ್ಟದ ನಿಯೋಗ 2ನೇ ಬಾರಿ ತೈವಾನ್‌ಗೆ ಭೇಟಿ ನೀಡಿದೆ.
ಅಮೆರಿಕಾದ ಆರ್ಥಿಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಕೀತ್ ಕ್ರಾಚ್ ನೇತೃತ್ವದ ನಿಯೋಗ ಇಂದು ತೈವಾನ್‌ಗೆ ಬಂದಿಳಿದಿದ್ದು, ಇಲ್ಲಿನ ಆರ್ಥಿಕ ವ್ಯವಹಾರಗಳ ಸಚಿವರ ಜೊತೆ ಮಾತುಕತೆ ನಡೆಸಲಿದ್ದಾರೆ. ಉದ್ಯಮಿಗಳನ್ನು ಭೇಟಿ ಮಾಡಲಿರುವ ಕ್ರಾಚ್, ಅಧ್ಯಕ್ಷೆ ತ್ಸೈ ಇಂಗ್-ವೆನ್ ಅವರೊಂದಿಗೆ ರಾತ್ರಿಯ ಔತಣ ಕೂಟದಲ್ಲಿಂದು ಭಾಗವಹಿಸಲಿದ್ದಾರೆ.