ಬೀಜಿಂಗ್:ಡ್ರ್ಯಾಗನ್ ದೇಶದ ಜನರ ವರ್ಷಗಳ ಬೇಡಿಕೆ ಈಡೇರಿಕೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ. ಚೀನಾದಲ್ಲಿ ದಂಪತಿ ಇನ್ಮುಂದೆ ಮೂರು ಮಕ್ಕಳನ್ನು ಹೊಂದುವ ನೀತಿಗೆ ಅನುಮತಿಸಲಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈ ಸಂಬಂಧ ಹೊಸ ಕಾನೂನು ಜಾರಿಗೆ ತರಲಾಗುತ್ತಿದೆ.
ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಚೀನಿ ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿರುವುದನ್ನು ಪರಿಹರಿಸುವ ಒಂದು ವಿಶೇಷ ಪ್ರಯತ್ನದಲ್ಲಿ, ತಿದ್ದುಪಡಿ ಮಾಡಿದ ಕಾನೂನು ರೂಪಿಸಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಬೆಂಬಲದ ಕ್ರಮಗಳನ್ನು ಈ ಸಮಿತಿ ಅಂಗೀಕರಿಸಿದೆ.