ಬೀಜಿಂಗ್:ಭಾರತವು ಉಭಯ ರಾಷ್ಟ್ರಗಳ ಒಪ್ಪಂದವನ್ನು ಉಲ್ಲಂಘಿಸಿದ್ದು ಮತ್ತು ನಮ್ಮ ಸೇನೆಯ ಸಿಬ್ಬಂದಿ ಮೇಲೆ ಪ್ರಚೋದನಕಾರಿ ದಾಳಿ ಮಾಡಿದೆ ಎಂದು ಚೀನಾದ ಭಾರತದ ಮೇಲೆ ಆರೋಪ ಹೊರಿಸಿದೆ.
ಭಾರತದ ಸೇನೆಯೇ ಮೊದಲು 'ಪ್ರಚೋದನಕಾರಿ ದಾಳಿ' ಮಾಡಿದ್ದು: ಚೀನಾ ಆರೋಪ - ಭಾರತ ಚೀನಾ ಗಡಿ ವಿವಾದ
ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಗೆ ಭಾರತ ಕಾರಣ ಎಂದು ಚೀನಾ ಆಪಾದಿಸಿದೆ. ವಿವಾದಿತ ಗಡಿ ಪ್ರದೇಶ ದಾಟಿ ಭಾರತೀಯ ಸೇನೆಯ ಸಿಬ್ಬಂದಿ ನಮ್ಮ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.
ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಕಾಳಗಕ್ಕೆ ಭಾರತ ಕಾರಣ ಅನ್ನೋದು ಚೀನಾ ವಾದವಾಗಿದೆ. ವಿವಾದಿತ ಗಡಿ ಪ್ರದೇಶ ದಾಟಿ ಭಾರತೀಯ ಸೇನೆಯ ಸಿಬ್ಬಂದಿ ನಮ್ಮ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಗಡಿ ವಿವಾದದ ಕುರಿತು ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಯುತ್ತಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.
ಜೂನ್ 15ರಂದು ಭಾರತೀಯ ಪಡೆಗಳು ಉಭಯ ಪಕ್ಷಗಳ ಒಮ್ಮತವನ್ನು ಗಂಭೀರವಾಗಿ ಉಲ್ಲಂಘಿಸಿದ್ದು ಎರಡು ಬಾರಿ ಅಕ್ರಮವಾಗಿ ಗಡಿ ದಾಟಿ ಚೀನಾ ಸೇನೆಯ ಮೇಲೆ ಪ್ರಚೋದನಕಾರಿ ದಾಳಿ ನಡೆಸಿವೆ. ಇದು ಎರಡು ಪಡೆಗಳ ನಡುವೆ ಗಂಭೀರ ಘರ್ಷಣೆಗೆ ಕಾರಣವಾಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲಿಜಿಯಾನ್ ಝಾವೋ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.