ಕರ್ನಾಟಕ

karnataka

ETV Bharat / international

ಗಡಿ ಗಲಾಟೆಯಲ್ಲಿ ಉಭಯ ದೇಶಗಳ ಸೈನಿಕರ ಪ್ರಾಣಹಾನಿ: ಭಾರತ ಸ್ಪಷ್ಟನೆ - ಚೀನಾ ವಿದೇಶಾಂಗ ಸಚಿವಾಲಯ

ಭಾರತ ಗಡಿ ಉಲ್ಲಂಘನೆ ಮಾಡಿ ನಡೆಸಿದ ದಾಳಿಯಲ್ಲಿ ಚೀನಾದ ಸೈನಿಕರೂ ಮೃತಪಟ್ಟಿದ್ದಾರೆ ಎಂದು ಚೀನಾ ಆರೋಪಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.

china-accuses-india-of-crosssing-border-attackingchinese-personnel
ಗಡಿ ಉದ್ವಿಗ್ನತೆಯಲ್ಲಿ ಚೀನಾ ಸೈನಿಕರೂ ಮೃತಪಟ್ಟಿದ್ದಾರೆ: ಚೀನಾ ಆರೋಪ

By

Published : Jun 16, 2020, 1:56 PM IST

ಬೀಜಿಂಗ್‌:ಪೂರ್ವ ಲಡಾಕ್‌ನಲ್ಲಿ ನಡೆದ ಸಂಘರ್ಷದಲ್ಲಿ ಎರಡೂ ಕಡೆಯ ಯೋಧರಿಗೆ ಹಾನಿಯಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟೀಕರಣ ನೀಡಿದೆ. ಇನ್ನೊಂದೆಡೆ,ಭಾರತ ಗಡಿ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಚೀನಾದ ಸೈನಿಕರೂ ಕೂಡಾ ಮೃತಪಟ್ಟಿದ್ದಾರೆ ಎಂದು ಚೀನಾ ಆರೋಪಿಸಿದೆ.

ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬೇಡಿ ಎಂದಿದೆ.

ಸೋಮವಾರ ರಾತ್ರಿ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಮುಖಾಮುಖಿಯ ಸಂಘರ್ಷ ಉಂಟಾಗಿದೆ.

ಗುಂಡು ಹಾರಲಿಲ್ಲ, ಪರಸ್ಪರ ಹೊಡೆದಾಡಿಕೊಂಡು ನಡೆದ ಘಟನೆ:

ಸೈನಿಕರು ಗಡಿಯಲ್ಲಿ ಬಂದೂಕಿನಿಂದ ಶೂಟ್‌ ಮಾಡಿಕೊಂಡಿಲ್ಲ, ಕೈಗಳಿಂದ ಹೊಡೆದಾಡಿಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details