ಗುಯಾಂಗ್, ಚೀನಾ:ನೈರುತ್ಯ ಚೀನಾದ ಗುಝೌ ಪ್ರಾಂತ್ಯದ ಬಿಜೀ ಎಂಬ ನಗರದಲ್ಲಿ ಭೂಕುಸಿತ ಉಂಟಾಗಿ ಐದು ಮಂದಿ ಸಾವನ್ನಪ್ಪಿ, 9 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಜೀಯ ಸ್ಥಳೀಯ ಸರ್ಕಾರದ ಪ್ರಕಾರ ನಿರ್ಮಾಣ ಕಾಮಗಾರಿಯೊಂದು ನಡೆಯುತ್ತಿದ್ದ ಸ್ಥಳದಲ್ಲಿ ಭೂಕುಸಿತ ಉಂಟಾಗಿದ್ದು, ಸೋಮವಾರ ಸಂಜೆ 7 ಗಂಟೆಗೆ ಅವಘಡ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಘಟನೆಯ ನಂತರ ಏಳು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಅವರಲ್ಲಿ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ನಾಪತ್ತೆಯಾದ 9 ಮಂದಿಯನ್ನು ಹುಡುಕಲು ವಿವಿಧ ವಿಭಾಗಗಳ 720ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಇದನ್ನೂ ಓದಿ:ಅಣ್ವಸ್ತ್ರ ಯುದ್ಧ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ.. ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಬದ್ಧತೆ ಪ್ರದರ್ಶಿಸಿದ ಪಂಚ ಸೂಪರ್ ಪವರ್ ದೇಶಗಳು!!