ಗಿಲ್ಗಿತ್(ಪಾಕಿಸ್ತಾನ): ಭಾನುವಾರ ಬೆಳಗ್ಗೆ ಬಸ್ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸುಮಾರು 27 ಜನ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸರ್ಕಾರ ತಿಳಿಸಿದೆ.
ಇಂದು ಬೆಳಗ್ಗೆ ಸ್ಕರ್ದು ಪಟ್ಟಣದಿಂದ ರಾವಲ್ಪಿಂಡಿ ಕಡೆ 16 ಯೋಧರು ಸೇರಿದಂತೆ 40 ಜನ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬೆಟ್ಟ-ಗುಡ್ಡಗಳ ದುರ್ಗಮ ದಾರಿಯಲ್ಲಿ ಬಸ್ ಸಾಗುತ್ತಿದ್ದು, ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಬಸ್ನಲ್ಲಿದ್ದ 10 ಯೋಧರು ಸೇರಿದಂತೆ 27 ಜನ ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕ್ ಸರ್ಕಾರದ ಪ್ರತಿನಿಧಿ ಫಯಾಜುಲ್ಲಾ ಫರಕ್ ತಿಳಿಸಿದ್ದಾರೆ.