ಕರ್ನಾಟಕ

karnataka

ETV Bharat / international

ಬಾಲಿವುಡ್​ 'ಕಿಂಗ್​ ಖಾನ್​' ಬರ್ತ್​ಡೇಗೆ ಬುರ್ಜ್‌ ಖಲೀಫಾದಿಂದ ವಿಶ್​..! - Shahrukh Khan birthday news

"ನನ್ನನ್ನು ಪ್ರಕಾಶಮಾನವಾಗಿ ಬೆಳಗಿಸಿದ್ದಕ್ಕಾಗಿ ನನ್ನ ಸಹೋದರ, ಮೊಹಮ್ಮದ್ ಅಲಾಬ್ಬರ್ ಮತ್ತು ಬುರ್ಜ್ ಖಲೀಫಾಗೆ ಧನ್ಯವಾದಗಳು. ನಿಮ್ಮ ಪ್ರೀತಿಯನ್ನು ಮೀರಿಸಲಾಗದು. ಇದು ನಿಜಕ್ಕೂ ಅದ್ಭುತ! ಲವ್ ಯು ದುಬೈ. ಇದು ನನ್ನ ಜನ್ಮದಿನ ಮತ್ತು ಇಂದು ನಾನೇ ಅತಿಥಿ" -ಶಾರುಖ್​​ ಖಾನ್

'ಕಿಂಗ್​ ಖಾನ್​' ಬರ್ತ್​ಡೇಗೆ ಬುರ್ಜಿ ಖಲೀಫಾದಿಂದ ವಿಶ್

By

Published : Nov 3, 2019, 9:33 AM IST

ದುಬೈ/ಹೈದರಾಬಾದ್:ನಿನ್ನೆ ಬಾಲಿವುಡ್​ ಕಿಂಗ್ ಶಾರುಖ್​​ ಖಾನ್ 54ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನಕ್ಕೆ ವಿಶ್ವದ ಅತಿ ಎತ್ತರದ ಕಟ್ಟಡ, ದುಬೈನ ಬುರ್ಜ್‌ ಖಲೀಫಾ ವಿಭಿನ್ನವಾಗಿ ಶಾರುಖ್​ಗೆ ವಿಶ್​ ಮಾಡಿದೆ.

'Happy Birthday... To the King of Bollywood' ಅಂತಾ ಜಗತ್ತಿನ ಅತಿ ದೊಡ್ಡ ಕಟ್ಟಡದ ಮೇಲೆ ದೊಡ್ಡ ಅಕ್ಷರಗಳಲ್ಲಿ ವರ್ಣರಂಜಿತ ಬೆಳಕಿನಿಂದ ಬರೆದು ಶಾರುಖ್​ ಖಾನ್​ಗೆ ವಿಶ್​ ಮಾಡಲಾಗಿದೆ. ಈ ಅಪೂರ್ವ ಕ್ಷಣವನ್ನು ದುಬೈನಲ್ಲಿರುವ ಶಾರುಖ್​ ಅಭಿಮಾನಿಗಳು ಎಂಜಾಯ್​ ಮಾಡಿದ್ದಾರೆ.

ಈ ವಿಡಿಯೋವನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿರೋ ಶಾರುಖ್​, "ನನ್ನನ್ನು ಪ್ರಕಾಶಮಾನವಾಗಿ ಬೆಳಗಿಸಿದ್ದಕ್ಕಾಗಿ ನನ್ನ ಸಹೋದರ, ಮೊಹಮ್ಮದ್ ಅಲಾಬ್ಬರ್ ಮತ್ತು ಬುರ್ಜ್‌ ಖಲೀಫಾಗೆ ಧನ್ಯವಾದಗಳು. ನಿಮ್ಮ ಪ್ರೀತಿಯನ್ನು ಮೀರಿಸಲಾಗದು. ಇದು ನಿಜಕ್ಕೂ ಅದ್ಭುತ! ಲವ್ ಯು ದುಬೈ. ಇದು ನನ್ನ ಜನ್ಮದಿನ ಮತ್ತು ನಾನೇ ಅತಿಥಿ" ಎಂದು ಬರೆದುಕೊಂಡಿದ್ದಾರೆ.

ಇನ್ನು, ಬುರ್ಜ್‌ ಖಲಿಫಾ ಶಾರುಖ್​ ಖಾನ್​ ಹುಟ್ಟುಹಬ್ಬಕ್ಕೆ ವಿಶ್​ ಮಾಡಿರುವುದು ಶಾರುಖ್​ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಜಗತ್ತಿನ ವಿಶೇಷ ದಿನಗಳಂದು ಮಾತ್ರವೇ ಅಪರೂಪವೆಂಬಂತೆ ಬುರ್ಜ್ ಖಲೀಫಾದಲ್ಲಿ ಧ್ವನಿ ಹಾಗೂ ಬೆಳಕಿನಾಟವನ್ನು ಕಾಣಬಹುದು. ಅದು ಶಾರುಖ್​​​ ಖಾನ್​ ಹುಟ್ಟು ಹಬ್ಬಕ್ಕೂ ಮಾಡಿರುವುದು ಜಗತ್ತಿನ ಹುಬ್ಬೇರಿಸುವಂತೆ ಮಾಡಿದೆ.

ABOUT THE AUTHOR

...view details