ಕರ್ನಾಟಕ

karnataka

ETV Bharat / international

ಕರೊನಾ ಚಿಕಿತ್ಸೆಗಾಗಿ 10 ದಿನದಲ್ಲಿ ನಿರ್ಮಾಣವಾಯ್ತು ಆಸ್ಪತ್ರೆ... ರೋಗಿಗಳಿಗೆ ಚಿಕಿತ್ಸೆ ಆರಂಭ! - ಕರೊನಾಗಾಗಿ 10 ದಿನದಲ್ಲಿ ಆಸ್ಪತ್ರೆ ಆರಂಭ

ಮಹಾಮಾರಿ ಕರೊನಾಗೆ ಚೀನಾದಲ್ಲಿ ನಿತ್ಯ ಅನೇಕ ಜನರು ಸಾವಿನ ಕದ ತಟ್ಟುತ್ತಿದ್ದು, ಇದೀಗ ಅದಕ್ಕೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇವಲ 10 ದಿನದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ ನೆರೆಯ ರಾಷ್ಟ್ರ ದಾಖಲೆ ಬರೆದಿದೆ.

Coronavirus
virus hospital

By

Published : Feb 3, 2020, 12:01 PM IST

ಬೀಜಿಂಗ್​​(ಚೀನಾ):ಮಹಾಮಾರಿ ಕರೊನಾ ವೈರಸ್​ಗೆ ತುತ್ತಾಗಿ ಚೀನಾದಲ್ಲಿ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದು, ಇದೀಗ ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇವಲ 10 ದಿನದಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣಗೊಂಡಿದೆ.

ಸುಮಾರು 1,500 ಬೆಡ್​​ಗಳನ್ನೊಳಗೊಂಡಿರುವ ಅತ್ಯಾಧುನಿಕ ಆಸ್ಪತ್ರೆ ಇದಾಗಿದ್ದು, ಉದ್ಘಾಟನೆ ಸಹ ನಡೆದಿದೆ. ಆಸ್ಪತ್ರೆ ನಿರ್ಮಾಣಕ್ಕಾಗಿ ರಾತ್ರಿ - ಹಗಲು ಕೆಲಸ ಮಾಡಲಾಗಿದ್ದು, ಪೂರ್ವ ನಿರ್ಮಿತ ಗೋಡೆಗಳ ಸಹಾಯದಿಂದ 25 ಸಾವಿರ ಚದರ ಅಡಿಯಲ್ಲಿ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಸರಿಸುಮಾರು 7 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ವ್ಯುಹಾನ್​​ ಮತ್ತು ಹುಬೇ ಪ್ರಾಂತ್ಯದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು,ಇಂದಿನಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾಮಾರಿ ಕರೊನಾಗೆ ಈಗಾಗಲೇ ಚೀನಾದಲ್ಲಿ 360 ಜನರು ಸಾವಿಗೀಡಾಗಿದ್ದು, 17,000 ಮಂದಿ ವೈರಸ್​ ಸೋಂಕಿಗೆ ಒಳಗಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್​ ಹಾಗೂ ಇತರ ಸಿಬ್ಬಂದಿ ಸೇರಿದಂತೆ 1,700 ಜನರು ಕಾರ್ಯ ನಿರ್ವಹಿಸಲಿದ್ದಾರೆ.

ABOUT THE AUTHOR

...view details