ಕರ್ನಾಟಕ

karnataka

ETV Bharat / international

ಶರಣಾದರೂ ಅಫ್ಘನ್​ ಪೊಲೀಸ್ ಮುಖ್ಯಸ್ಥನ ಹತೈಗೈದ ತಾಲಿಬಾನ್​.. ವಿಡಿಯೋ ವೈರಲ್​ - Haji Mullah Achakzai

ಅಫ್ಘಾನಿಸ್ತಾನದ ಬಾಗ್ದಿಸ್ ಪ್ರಾಂತ್ಯದ ಪೊಲೀಸ್​ ಮುಖ್ಯಸ್ಥ ಹಾಜಿ ಮುಲ್ಲಾ ಅಚಕ್‌ಜಾಯ್ ಅವರನ್ನು ಮಂಡಿಯೂರಿ ಕೂರಿಸಿ, ಕೈಗಳನ್ನು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಹಲವಾರು ಸುತ್ತು ಉಗ್ರರು ಗುಂಡು ಹಾರಿಸಿರುವುದು ವೈರಲ್​ ವಿಡಿಯೋದಲ್ಲಿ ಕಂಡು ಬಂದಿದೆ..

Brutal video reportedly shows Afghan police chief executed by Taliban
ಶರಣಾದರೂ ಆಫ್ಘನ್​ ಪೊಲೀಸ್ ಮುಖ್ಯಸ್ಥನ ಹತೈಗೈದ ತಾಲಿಬಾನ್

By

Published : Aug 22, 2021, 5:23 PM IST

ಕಾಬೂಲ್(ಅಫ್ಘಾನಿಸ್ತಾನ) :ತಾಲಿಬಾನ್ ಸಂಘಟನೆಗೆ ಶರಣಾದ ಬಳಿಕವೂ ಅಫ್ಘಾನಿಸ್ತಾನದ ಪೊಲೀಸ್ ಮುಖ್ಯಸ್ಥರೊಬ್ಬರನ್ನು ಅಮಾನುಷವಾಗಿ ಉಗ್ರರು ಹತೈಗೈದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಅಫ್ಘಾನಿಸ್ತಾನದ ಬಾಗ್ದಿಸ್ ಪ್ರಾಂತ್ಯದ ಪೊಲೀಸ್​ ಮುಖ್ಯಸ್ಥ ಹಾಜಿ ಮುಲ್ಲಾ ಅಚಕ್‌ಜಾಯ್ ಅವರನ್ನು ಮಂಡಿಯೂರಿ ಕೂರಿಸಿ, ಕೈಗಳನ್ನು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಹಲವಾರು ಸುತ್ತು ಉಗ್ರರು ಗುಂಡು ಹಾರಿಸಿರುವುದು ವೈರಲ್​ ವಿಡಿಯೋದಲ್ಲಿ ಕಂಡು ಬಂದಿದೆ.

ಅಲ್ಲದೇ ಈ ವಿಡಿಯೋವನ್ನು ತಾಲಿಬಾನ್ ಸಂಬಂಧಿತ ನೆಟ್‌ವರ್ಕ್ ಒಂದು ಹಂಚಿಕೊಂಡಿದೆ. ಹಾಜಿ ಮುಲ್ಲಾ ಅವರನ್ನು ವೈಯಕ್ತಿಕವಾಗಿ ತಿಳಿದಿದ್ದ ಅಫ್ಘನ್ ಭದ್ರತಾ ಸಲಹೆಗಾರ ನಾಸರ್ ವಾಜಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವೈರಲ್​ ಆಗಿರುವ ವಿಡಿಯೋ ಕ್ಲಿಪ್​ ಅನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details