ಕರ್ನಾಟಕ

karnataka

ETV Bharat / international

ಪೊಂಗಲ್​ ಹಬ್ಬದ ಸಂಭ್ರಮ: ತಮಿಳು ಸಮುದಾಯಕ್ಕೆ ಶುಭ ಕೋರಿದ ಯುಕೆ ಪ್ರಧಾನಿ - ಪೊಂಗಲ್​ ಹಬ್ಬದ ಸಂಭ್ರಮ

ಬ್ರಿಟನ್​ನಲ್ಲಿರುವ ತಮಿಳು ಸಮುದಾಯಕ್ಕೆ ಬ್ರಿಟನ್​ ಪ್ರಧಾನಿ ವಿಡಿಯೋ ಮೂಲಕ ಪೊಂಗಲ್ ಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.

British PM Boris Johnson
British PM Boris Johnson

By

Published : Jan 14, 2021, 10:03 PM IST

ಲಂಡನ್​: ದೇಶಾದ್ಯಂತ ಸಡಗರ-ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗ್ತಿದೆ. ತಮಿಳುನಾಡಿನಲ್ಲೂ ಪೊಂಗಲ್ ಹೆಸರಿನಲ್ಲಿ ಈ ಹಬ್ಬ ಆಚರಿಸಲಾಗುತ್ತಿದ್ದು, ತಮಿಳು ಸಮುದಾಯಕ್ಕೆ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಶುಭಾಶಯ ಕೋರಿದ್ದಾರೆ.

ಓದಿ: 'ಭಾರತದ ತೇಜಸ್​ ಪಾಕ್​-ಚೀನಾದ ಜೆಎಫ್​-17 ಯುದ್ಧ ವಿಮಾನಕ್ಕಿಂತಲೂ ಶಕ್ತಿಶಾಲಿ'

ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹರಿಬಿಟ್ಟು ಶುಭ ಹಾರೈಕೆ ಮಾಡಿರುವ ಪ್ರಧಾನಿ, ಬ್ರಿಟಿಷ್ ತಮಿಳು ಸಮುದಾಯ ಹಾಗೂ ಪ್ರಪಂಚದಾದ್ಯಂತ ವಾಸಿಸುತ್ತಿರುವ ತಮಿಳುಗರಿಗೆ ಪೊಂಗಲ್​ ಹಬ್ಬದ ಶುಭಾಶಯಗಳು. ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ಒಟ್ಟುಗೂಡಿ ಈ ಸಂಭ್ರಮ ಆಚರಿಸಲು ನೀವೂ ಎದರು ನೋಡುತ್ತಿದ್ದೀರಿ ಎಂದು ಸಂದೇಶ ರವಾನಿಸಿದ್ದಾರೆ.

ಬ್ರಿಟನ್​ಗೆ ತಮಿಳು ಸಮುದಾಯ ನೀಡಿರುವ ಕೊಡುಗೆಗಳಿಗೆ ಅವರು ವಿಡಿಯೋದಲ್ಲಿ ಕೃತಜ್ಞತೆ ಸಲ್ಲಿಸಿದ್ದು, ದೇಶದ ಆರ್ಥಿಕತೆ ಹೆಚ್ಚಿಸಲು, ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಹಾಗೂ ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ ಎಂದು ತಿಳಿಸಿದ್ದಾರೆ.

ABOUT THE AUTHOR

...view details