ಕರ್ನಾಟಕ

karnataka

ETV Bharat / international

ಸುಯೆಜ್ ಕಾಲುವೆಯಲ್ಲಿ ಸಿಲುಕಿದ ದೈತ್ಯ ಹಡಗು : ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ಪರಿಣಾಮ - ಸುಯೆಜ್ ಕಾಲುವೆಯಲ್ಲಿ ಸಿಲುಕಿದ ದೈತ್ಯ ಹಡಗು

ಎವರ್‌ ಗಿವನ್ ಹಡಗು ಸುಯೆಜ್ ಕಾಲುವೆ ದಾಟುವ ಸಂದರ್ಭದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಈ ವೇಳೆ ಗಾಳಿಯ ರಭಸದಿಂದ ದಿಕ್ಕು ತಪ್ಪಿದ ಈ ದೈತ್ಯ ಹಡಗು, ಕಾಲುವೆಯ ಬಳಿ ಅಡ್ಡವಾಗಿ ಸಿಲುಕಿದೆ. ಪರಿಣಾಮವಾಗಿ ಈ ಹಡಗಿನ ಹಿಂದೆ ಕಾಲುವೆ ದಾಟಲು ಕಾಯುತ್ತಿದ್ದ ಇತರ ಸರಕು ಹಡಗುಗಳು ಮುಂದಕ್ಕೆ ಸಾಗಲಾಗದೇ ನಿಂತಲ್ಲೇ ನಿಂತಿವೆ..

ಸುಯೆಜ್
vಸುಯೆಜ್

By

Published : Mar 27, 2021, 6:11 PM IST

ಸುಯೆಜ್ ಕಾಲುವೆ ಬಳಿ ಅತ್ಯಂತ ಬೃಹತ್ ಸರಕು ಸಾಗಣೆ ಹಡಗೊಂದು ಸಿಲುಕಿಕೊಂಡಿದೆ. ಇದು ಜಾಗತಿಕ ಹಡಗು ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ತೈವಾನ್‌ನ ಎವರ್‌ಗ್ರೀನ್ ಮರೈನ್ ಕಂಪನಿ ನಿರ್ವಹಿಸುವ ಜಪಾನ್ ಒಡೆತನದ ಎವರ್ ಗಿವನ್ ಎಂಬ ಸರಕು ಹಡಗು ಸುಯೆಜ್ ಕಾಲುವೆಯ ಮಾರ್ಗ ಮಧ್ಯೆ ಸಿಲುಕಿದೆ. ಬರೋಬ್ಬರಿ 2 ಲಕ್ಷ ಟನ್ ತೂಕದ ಈ ಸರಕು ಹಡಗನ್ನು ಬಂದರಿಗೆ ಮರಳಿ ತರಲು ಹರಸಾಹಸ ಮಾಡಲಾಗುತ್ತಿದ್ದು, ಇತರೆ ಹಡಗುಗಳ ಸಂಚಾರಕ್ಕೆ ತೊಂದರೆಯಾಗಿದೆ.

ಅಲ್ಲದೆ, ಜರ್ಮಿನಿಯ ಅಲಿಯನ್ಸ್ ನಡೆಸಿದ ಅಧ್ಯಯನದ ಪ್ರಕಾರ ಹಡಗನ್ನು ತೆರವುಗೊಳಿಸಲು ಒಂದು ವಾರಗಳ ಸಮಯಾವಕಾಶ ಬೇಕಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಸುಯೆಜ್ ಕಾಲುವೆ ಬಳಿ ಭಾರೀ ಸಂಖ್ಯೆಯಲ್ಲಿ ಇತರ ವಾಣಿಜ್ಯ ಹಡಗುಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ವ್ಯತ್ಯಯದಿಂದಾಗಿ ಲಕ್ಷಾಂತರ ಡಾಲರ್ ಮೊತ್ತದ ವ್ಯಾಪಾರಕ್ಕೆ ಅಡ್ಡಿಯಾಗಿದೆ.

ಹಡಗು ಸಿಲುಕಿದ್ದು ಹೇಗೆ?:ಎವರ್‌ ಗಿವನ್ ಹಡಗು ಸುಯೆಜ್ ಕಾಲುವೆ ದಾಟುವ ಸಂದರ್ಭದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಈ ವೇಳೆ ಗಾಳಿಯ ರಭಸದಿಂದ ದಿಕ್ಕು ತಪ್ಪಿದ ಈ ದೈತ್ಯ ಹಡಗು, ಕಾಲುವೆಯ ಬಳಿ ಅಡ್ಡವಾಗಿ ಸಿಲುಕಿದೆ. ಪರಿಣಾಮವಾಗಿ ಈ ಹಡಗಿನ ಹಿಂದೆ ಕಾಲುವೆ ದಾಟಲು ಕಾಯುತ್ತಿದ್ದ ಇತರ ಸರಕು ಹಡಗುಗಳು ಮುಂದಕ್ಕೆ ಸಾಗಲಾಗದೇ ನಿಂತಲ್ಲೇ ನಿಂತಿವೆ.

ಸದ್ಯ ಈ ದೈತ್ಯ ಹಡಗನ್ನು ಸ್ಥಳಾಂತರಿಸಲು ಸಣ್ಣ ಬೋಟ್‌ಗಳ ಸಹಾಯ ಪಡೆಯಲಾಗಿದೆ. ಮೊದಲು ಹಡಗಿನಲ್ಲಿರುವ ಸರಕನ್ನು ಖಾಲಿ ಮಾಡಿ ಹಡಗಿನ ಭಾರವನ್ನು ತಗ್ಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎವರ್ ಗಿವನ್ ಹಡಗಿನ 25 ಸಿಬ್ಬಂದಿ ಸುರಕ್ಷಿತವಾಗಿದ್ದು, ಅವರನ್ನು ಹಡಗಿನಿಂದ ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details