ಕರ್ನಾಟಕ

karnataka

ETV Bharat / international

Video: ಕಾಬೂಲ್​ ಏರ್​ಪೋರ್ಟ್​​ ಬಳಿ ಬಾಂಬ್​​ ಸ್ಫೋಟ, 13 ಸಾವು, ಯುಎಸ್​​ ಯೋಧರು ಸೇರಿ ಅನೇಕರಿಗೆ ಗಾಯ - ಆಫ್ಘಾನಿಸ್ತಾನ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ಏರ್​ಪೋರ್ಟ್​ ಬಳಿ ಬಾಂಬ್​​ ಸ್ಫೋಟಗೊಂಡಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದು, ಅಮೆರಿಕದ ಮೂವರು ಯೋಧರು ಸೇರಿದಂತೆ 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಘಟನೆ ವೇಳೆ ಸ್ಥಳದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು ಎಂಬ ವರದಿ ಲಭ್ಯವಾಗಿದೆ.

Kabul airport
Kabul airport

By

Published : Aug 26, 2021, 7:54 PM IST

Updated : Aug 26, 2021, 10:10 PM IST

ಕಾಬೂಲ್​:ತಾಲಿಬಾನ್ ಉಗ್ರರ ಹತೋಟಿಯಲ್ಲಿರುವ ಅಫ್ಘಾನಿಸ್ತಾನದಲ್ಲಿ ಈಗಾಗಲೇ ಅರಾಜಕತೆ ಉಂಟಾಗಿದ್ದು, ಇದರ ಬೆನ್ನಲ್ಲೇ ಅಲ್ಲಿನ ಪ್ರಮುಖ ಏರ್​ಪೋರ್ಟ್​ ಕಾಬೂಲ್​​ನ ಪಕ್ಕದಲ್ಲೇ ಬಾಂಬ್​​ ಸ್ಫೋಟಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಿಲಿಟರಿ ಪಡೆ ನಿಖರ ಮಾಹಿತಿ ಹಂಚಿಕೊಂಡಿದೆ.

ಕಾಬೂಲ್​ ಏರ್​ಪೋರ್ಟ್​​ ಬಳಿ ಬಾಂಬ್​​ ಸ್ಫೋಟ

ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಸ್ಫೋಟದಿಂದಾಗಿ 13 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಮೂವರು ಅಮೆರಿಕದ ಯೋಧರು ಸೇರಿದಂತೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾಗಿ ವರದಿಯಾಗಿದೆ. ಕಾಬೂಲ್​ ಏರ್​ಪೋರ್ಟ್ ಬಳಿ ಸ್ಫೋಟವಾಗುತ್ತಿದ್ದಂತೆ ಈ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಬರೋನ್ ಹೋಟೆಲ್​ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಂದು ಬೆಳಗ್ಗೆ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ. ಕಾಬೂಲ್​ ಏರ್​ಪೋರ್ಟ್​​​​​ ಮೇಲೆ ತಾಲಿಬಾನಿಗಳು ಈಗಾಗಲೇ ಹಿಡಿತ ಸಾಧಿಸಿದ್ದು, ಇಲ್ಲಿಂದ ಪಲಾಯನ ಮಾಡಲು ಅನೇಕರು ಏರ್​ಪೋರ್ಟ್​ನಲ್ಲಿ ಉಪಸ್ಥಿತರಿದ್ದರು.

ಘಟನೆಯಲ್ಲಿ ಅನೇಕರಿಗೆ ಗಾಯ

ಪೆಂಟಗಾನ್​​ ವಕ್ತಾರ್​ ಜಾನ್​ ಕಿರ್ಬೈ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಕಾಬೂಲ್​ ಏರ್​ಪೋರ್ಟ್​​​ ಬಳಿ ಬಾಂಬ್​ ಸ್ಫೋಟಗೊಂಡಿರುವುದು ನಿಜ ಎಂದು ಹೇಳಿದ್ದಾರೆ. ಬಾಂಬ್​ ಸ್ಫೋಟಗೊಳ್ಳುತ್ತಿದ್ದಂತೆ, ಈ ಸ್ಥಳದಲ್ಲಿ ಫೈರಿಂಗ್ ಕೂಡ ನಡೆಸಲಾಗಿದೆ. ಇದರಿಂದ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ತಾಲಿಬಾನ್​ ಉಗ್ರರ ಅಟ್ಟಹಾಸ ಹೆಚ್ಚಾಗಿರುವ ಸಮಯದಿಂದಲೂ ಸುಮಾರು 9 ಸಾವಿರಕ್ಕೂ ಅಧಿಕ ಅಫ್ಘಾನಿಸ್ತಾನದ ನಾಗರಿಕರು ವಿವಿಧ ದೇಶಗಳಿಗೆ ತೆರಳಿದ್ದಾರೆ. ಕೆಳೆದ ಕೆಲ ದಿನಗಳಿಂದ ಕಾಬೂಲ್​ ಏರ್​ಪೋರ್ಟ್ ಮೇಲೆ ತಾಲಿಬಾನಿಗಳು ಹಿಡಿತ ಸಾಧಿಸಿದ್ದಾರೆ.

Last Updated : Aug 26, 2021, 10:10 PM IST

ABOUT THE AUTHOR

...view details