ವಾಷಿಂಗ್ಟನ್: ಕಳೆದ ಗುರುವಾರ ಕಾಬೂಲ್ ವಿಮಾನ ನಿಲ್ದಾಣದ ಸಮೀಪ ಐಸಿಸ್ ಖೊರಾಸಾನ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 170 ಮಂದಿ ಮೃತಪಟ್ಟಿದ್ದ ಬೆನ್ನಲ್ಲೇ ಇನ್ನಷ್ಟು ಭೀಕರ ಕೃತ್ಯಕ್ಕೆ ಉಗ್ರರ ಸಜ್ಜಾಗಿದ್ದಾರೆ ಎಂಬ ಮಾಹಿತಿಯನ್ನು ಯುಎಸ್ ರಾಷ್ಟ್ರೀಯ ಭದ್ರತಾ ತಂಡ ಅಧ್ಯಕ್ಷ ಬೈಡನ್‌ಗೆ ನೀಡಿದ್ದಾರೆ.
ಮತ್ತೊಂದು ದಾಳಿಯ ಮುನ್ಸೂಚನೆ ಹಿನ್ನೆಲೆಯಲ್ಲಿ ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಈ ತಂಡ ಬೈಡನ್ ಅವರಿಗೆ ಸಲಹೆ ನೀಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗಿಸಿದರೆ ಸೇನೆ ಬಳಕೆ: ಬೈಡನ್ ಎಚ್ಚರಿಕೆ
ಆತ್ಮಾಹುತಿ ಬಾಂಬ್ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಮೃತಪಟ್ಟ ಮರು ದಿನವೇ ಬೈಡನ್ ಅವರು ಈ ಮಾಹಿತಿ ಪಡೆದಿದ್ದಾರೆ ಎಂದು ಶ್ವತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ನಡೆಯಲಿರುವ ಜನರ ಸ್ಥಳಾಂತರ ಕಾರ್ಯಾಚರಣೆ ಅತ್ಯಂತ ಅಪಾಯಕಾರಿಯಾಗಿದೆ ಎಂತಲೂ ಜೆನ್ ಹೇಳಿದ್ದಾರೆ. ಆಗಸ್ಟ್ 31ರೊಳಗೆ ಅಪ್ಘಾನ್‌ನಿಂದ ಸ್ಥಳಾಂತರಿಸುವ ಕಾರ್ಯ ಮುಗಿಯಬೇಕು ಎಂದು ಬೈಡನ್ ಈ ಹಿಂದೆಯೇ ತಿಳಿಸಿದ್ದರು.