ಥಿಂಫು/ಭೂತಾನ್: ರೂಪಾಂತರಗೊಂಡಿರುವ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಭೂತಾನ್ನಲ್ಲಿ 7 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿ ಭೂತಾನ್ ಪ್ರಧಾನಿ ಲೋಟೆ ಶೆರಿಂಗ್ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 23 ರಿಂದ ಏಳು ದಿನಗಳವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು, ಲಾಕ್‌ಡೌನ್, ಸರ್ಕಾರವು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ ಮತ್ತು ಸಮುದಾಯಗಳಲ್ಲಿ ಹರಡುವಿಕೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದಿದ್ದಾರೆ.
ಡಿಸೆಂಬರ್ 22 ರಂದು ಭೂತಾನ್ನ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಭೂತಾನ್ನಲ್ಲಿ 479 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 430 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ ಕೊರೊನಾ ಸೋಂಕಿನಿಂದ ಭೂತಾನ್ನಲ್ಲಿ ಸಾವುಗಳು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಅಗತ್ಯ ಸೇವೆಗಳಿಗಾಗಿ ಗುರುತು ಪಡಿಸಿರುವ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದು, ಭೂತಾನ್ನ ಎಲ್ಲಾ ಶಾಲೆಗಳು, ಸಂಸ್ಥೆಗಳು, ಕಚೇರಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಿವೆ. ವಲಯಗಳೊಳಗೆ ಓಡಾಡಲು ಕಾರ್ಡ್ ಹೊಂದಿರುವ ವ್ಯಕ್ತಿಗಳ ಓಡಾಟ ಮತ್ತು ಅಗತ್ಯ ವಸ್ತುಗಳ ವಿತರಣೆ ನಾಳೆಯಿಂದ ಥಿಂಫುವಿನಲ್ಲಿ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಇಫ್ಕೋ ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆ : ಇಬ್ಬರು ನೌಕರರು ಸಾವು, 15 ಮಂದಿ ಅಸ್ವಸ್ಥ