ಬೀಜಿಂಗ್(ಚೀನಾ):ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ನ ಜನ್ಮ ಸ್ಥಳವಾದ ಚೀನಾ ದೇಶದಲ್ಲಿ ಇತ್ತೀಚೆಗೆ ಆರು ಹೊಸ ಕೊರೊನಾ ವೈರಸ್ ಸೋಂಕುಗಳು ಪತ್ತೆಯಾಗಿದ್ದು, 40 ರೋಗಲಕ್ಷಣಗಳಿಲ್ಲದ ಪ್ರಕರಣಗಳು ವರದಿಯಾಗಿವೆ. ಈ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಿದ ನಂತರ ಕೋವಿಡ್-19 ವಿಶೇಷ ಆಸ್ಪತ್ರೆಗಳನ್ನು ಮುಚ್ಚಲಿದ್ದೇವೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ಇಂದು ತಿಳಿಸಿದ್ದಾರೆ.
ಚೀನಾದ ಕೊರೊನಾ ಕೇಂದ್ರವಾದ ವುಹಾನ್, ತಾತ್ಕಾಲಿಕವಾಗಿ ನಿರ್ಮಿಸಿದ್ದ 16 ಆಸ್ಪತ್ರೆಗಳನ್ನು ಮುಚ್ಚಿದ್ದು, ಭಾನುವಾರದಂದು ಕೊನೆಯ ರೋಗಿಯೊಬ್ಬನನ್ನು ಡಿಸ್ಚಾರ್ಜ್ ಮಾಡಿದ ನಂತರ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದಿದ್ದಾರೆ.
ಬೀಜಿಂಗ್‌ನ ಕ್ಸಿಯೋಟಾಂಗ್‌ಶಾನ್ ಆಸ್ಪತ್ರೆಯನ್ನು 2003 ರಲ್ಲಿ ಸಾರ್ಸ್ ರೋಗಿಗಳಿಗೆ ಚಿಕಿತ್ಸೆಗೆಂದು ಬಳಸಲಾಗುತ್ತಿತ್ತು. ನಂತರ ಈ ಆಸ್ಪತ್ರೆಯನ್ನು ಸಹ ಕೊರೊನಾ ಚಿಕಿತ್ಸೆಗೆ ಬಳಸಲಾಗಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳನ್ನು ತೆರವುಗೊಳಿಸಿ ಈ ವಿಶೇಷ ಆಸ್ಪತ್ರೆಗಳನ್ನು ಮುಚ್ಚಲಾಗುವುದು ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಬೀಜಿಂಗ್ನಲ್ಲಿ ಈವರೆಗೆ 593 ಕೊರೊನಾ ವೈರಸ್ ಪ್ರಕರಣಗಳು ಮತ್ತು ಒಂಬತ್ತು ಸಾವುಗಳು ಸಂಭವಿಸಿವೆ. 536 ರೋಗಿಗಳು ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದ್ದಾರೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ದೇಶದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಹೆಚ್ಸಿ) ಮಂಗಳವಾರದಂದು ಆರು ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ, ಅದರಲ್ಲಿ ಮೂರು ಪ್ರಕರಣಗಳು ವಿದೇಶದಿಂದ ಬಂದಿದ್ದಾಗಿದ್ದು, ಇತರೆ ಮೂರು ಹೊಸ ಪ್ರಕರಣಗಳು ದೇಶಿಯವಾಗಿ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಹರಡಿವೆ ಎಂದು ಎನ್ ಹೆಚ್‌ಸಿ ತನ್ನ ದೈನಂದಿನ ವರದಿಯಲ್ಲಿ ವಿವರಿಸಿದೆ.