ಬೀಜಿಂಗ್: ಬೀಜಿಂಗ್‌ನ ಕ್ಸಿನ್‌ಫಾಡಿ ಆಹಾರ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ನಂತರ, ನಗರದ ಮಾರುಕಟ್ಟೆಯ ಬಳಿಯಿರುವ 11 ವಸತಿ ಸಂಕೀರ್ಣಗಳನ್ನು ಲಾಕ್‌ಡೌನ್ ಮಾಡಲಾಗಿದೆ.
ಚೀನಾದಲ್ಲಿ ಕೊರೊನಾ ಎರಡನೇ ಅಲೆ... ಮಹಾಮಾರಿ ಹೊಡೆತಕ್ಕೆ ಬೆಚ್ಚಿಬಿದ್ದ ಬೀಜಿಂಗ್ - ಬೀಜಿಂಗ್‌ನ ಆಹಾರ ಮಾರುಕಟ್ಟೆ
ಶುಕ್ರವಾರ ಬೀಜಿಂಗ್‌ನ ಆಹಾರ ಮಾರುಕಟ್ಟೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಎಲ್ಲಾ ಕಾರ್ಮಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಆದೇಶಿಸಿಲಾಗಿದೆ.
![ಚೀನಾದಲ್ಲಿ ಕೊರೊನಾ ಎರಡನೇ ಅಲೆ... ಮಹಾಮಾರಿ ಹೊಡೆತಕ್ಕೆ ಬೆಚ್ಚಿಬಿದ್ದ ಬೀಜಿಂಗ್](https://etvbharatimages.akamaized.net/etvbharat/prod-images/768-512-7626491-1068-7626491-1592220124403.jpg)
ಬೀಜಿಂಗ್‌ನ 11 ಪ್ರದೇಶಗಳು ಲಾಕ್‌ಡೌನ್
ಶುಕ್ರವಾರ ಇಲ್ಲಿನ ಆಹಾರ ಮಾರುಕಟ್ಟೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಎಲ್ಲಾ ಕಾರ್ಮಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಆದೇಶಿಸಿಲಾಗಿದೆ.
ಚೀನಾ ಸೋಮವಾರ 49 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಹೊಸ ಪ್ರಕರಣಗಳಲ್ಲಿ, 36 ಬೀಜಿಂಗ್‌ನಲ್ಲಿ ವರದಿಯಾಗಿವೆ. ಇದು ಸಗಟು ಮಾರುಕಟ್ಟೆಯಲ್ಲಿ ಪತ್ತೆಯಾಗಿದ್ದು, ನಗರದ ಹೆಚ್ಚಿನ ಮಾಂಸ ಮತ್ತು ತರಕಾರಿಗಳನ್ನು ಈ ಮಾರುಕಟ್ಟೆ ಪೂರೈಸುತ್ತದೆ.