ಢಾಕಾ (ಬಾಂಗ್ಲಾದೇಶ):ಕೋವಿಡ್ -19 ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಜೂನ್ 6 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಬಾಂಗ್ಲಾದೇಶ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಮೇ 23 ರಂದು ಸರ್ಕಾರ ದೇಶಾದ್ಯಂತ ಮೇ 30 ರವರೆಗೆ ಲಾಕ್‌ಡೌನ್ ವಿಸ್ತರಿಸಿತ್ತು.
ಜೂನ್ 6 ರ ಮಧ್ಯರಾತ್ರಿಯವರೆಗೆ ಈ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದು ಬಾಂಗ್ಲಾದೇಶದ ಕ್ಯಾಬಿನೆಟ್ ವಿಭಾಗ ತಿಳಿಸಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.