ಕರ್ನಾಟಕ

karnataka

ETV Bharat / international

ಚೀನಾಕ್ಕೆ ಆಸ್ಟ್ರೇಲಿಯಾ ನೇರ ಎಚ್ಚರಿಕೆ: ಹಾಂಕಾಂಗ್​ನೊಂದಿಗಿನ ಒಪ್ಪಂದ ಅಮಾನತು - ಒಪ್ಪಂದ ಅಮಾನತುಗೊಳಿಸಿದ ಆಸ್ಟ್ರೇಲಿಯಾ

ಹಾಂಕಾಂಗ್ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಹೇರಿರುವುದಕ್ಕೆ ಪ್ರತಿಕ್ರಿಯೆಯಾಗಿ, ಹಾಂಕಾಂಗ್‌ನೊಂದಿಗಿನ ಹಸ್ತಾಂತರ ಒಪ್ಪಂದ ಮತ್ತು ಹಾಂಕಾಂಗ್ ನಿವಾಸಿಗಳಿಗೆ ವಿಸ್ತೃತ ವೀಸಾಗಳನ್ನು ಆಸ್ಟ್ರೇಲಿಯಾ ಸ್ಥಗಿತಗೊಳಿಸಿದೆ.

australia
australia

By

Published : Jul 9, 2020, 2:28 PM IST

ಸಿಡ್ನಿ( ಆಸ್ಟ್ರೇಲಿಯಾ):ಹಾಂಕಾಂಗ್‌ನೊಂದಿಗಿನ ಹಸ್ತಾಂತರ ಒಪ್ಪಂದ ಮತ್ತು ಹಾಂಕಾಂಗ್ ನಿವಾಸಿಗಳಿಗೆ ವಿಸ್ತೃತ ವೀಸಾಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

ಅರೆ ಸ್ವಾಯತ್ತ ಭೂಪ್ರದೇಶ ಹಾಂಕಾಂಗ್ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಹೇರಿರುವುದಕ್ಕೆ ತಿರುಗೇಟು ನೀಡುವುದಕ್ಕಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ವೀಸಾಗಳ ಶ್ರೇಣಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಮತ್ತು ಶಾಶ್ವತ ರೆಸಿಡೆನ್ಸಿ ವೀಸಾಗಳಿಗೆ ಬೇರೆ ಮಾರ್ಗಗಳ ಪ್ರಸ್ತಾಪಗಳನ್ನು ಪ್ರಧಾನಿ ಸ್ಕಾಟ್ ಮಾರಿಸನ್ ಪ್ರಕಟಿಸಿದ್ದಾರೆ.

ABOUT THE AUTHOR

...view details