ಕ್ಯಾನ್ಬೆರ: ಆಸ್ಟ್ರೇಲಿಯಾ ಸರ್ಕಾರವು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಹೀಗಾಗಿ ಕೋವ್ಯಾಕ್ಸಿನ್ ಪಡೆದ ಭಾರತೀಯರಿಗೆ ದೇಶ ಪ್ರವೇಶಿಸಲು ಇದೀಗ ಅವಕಾಶ ದೊರೆತಿದೆ.
ಕಳೆದ ತಿಂಗಳು ಆಸ್ಟ್ರೇಲಿಯಾವು ಪ್ರಯಾಣದ ಉದ್ದೇಶಗಳಿಗಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಕೋವಿಶೀಲ್ಡ್ ಲಸಿಕೆಯನ್ನು ಗುರುತಿಸಿತ್ತು. ಈ ನಿಯಮವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮರಳುವಿಕೆ ಮತ್ತು ಆಸ್ಟ್ರೇಲಿಯಾಕ್ಕೆ ನುರಿತ ಮತ್ತು ಕೌಶಲ್ಯಪೂರ್ಣ ಕಾರ್ಮಿಕರ ಪ್ರಯಾಣದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಕೋವ್ಯಾಕ್ಸಿನ್, BBIBP-CorV ಹಾಗು ಕೋವಿಶೀಲ್ಡ್ ಪಡೆದುಕೊಂಡ ಚೀನಾ ಮತ್ತು ಭಾರತ ಹಾಗೂ ಇತರ ದೇಶಗಳ ಅನೇಕ ನಾಗರಿಕರು ನಮ್ಮ ರಾಷ್ಟ್ರಕ್ಕೆ ಬಂದಾಗ ಅವರನ್ನು ಸಂಪೂರ್ಣ ಲಸಿಕಾಕರಣವಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಅಸ್ಟ್ರೇಲಿಯಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.