ಜಿನೆವಾ(ಸ್ವಿಟ್ಜರ್ಲ್ಯಾಂಡ್):ಜಗತ್ತಿನಲ್ಲಿ ಹೆಚ್ಚುತ್ತಿರುವ ಚೀನಾ ದೇಶದ ಪ್ರಾಬಲ್ಯವನ್ನು ತಡೆಯಲು ಅಮೆರಿಕ ಅನೇಕ ತಂತ್ರಗಳನ್ನು ಹೂಡಿದೆ. ಈ ಮೊದಲು ಭಾರತವೂ ಸದಸ್ಯತ್ವವಹಿಸಿದ್ದ ಕ್ವಾಡ್(QUAD) ಸಮೂಹಕ್ಕೆ ಹೊಸ ರೂಪುರೇಷೆ ನೀಡಿದ್ದ ಅಮೆರಿಕ ಈಗ ಭಾರತವನ್ನು ಹೊರತುಪಡಿಸಿ, ಔಕಸ್ (AUKUS) ಎಂಬ ಒಕ್ಕೂಟವನ್ನು ರಚಿಸಿಕೊಂಡಿದೆ. ಈ ಒಕ್ಕೂಟಕ್ಕೆ ಚೀನಾ ರಾಜತಾಂತ್ರಿಕ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ.
ಔಕಸ್ ಒಕ್ಕೂಟವನ್ನು ಶೀತಲ ಸಮರದ ಮನಸ್ಥಿತಿ ಇರುವ, ಸಂಕುಚಿತ ಮನಸ್ಸಿನ ಜಿಯೋಪೊಲಿಟಿಕಲ್ ಲೆಕ್ಕಾಚಾರಗಳನ್ನು ಹೊಂದಿರುವ ಪರಮಾಣು ಶಕ್ತಿ ಪ್ರಸರಣದ 'ಪಠ್ಯಪುಸ್ತಕ ಪ್ರಕರಣ' (textbook case) ಎಂದು ಜಿನೇವಾದಲ್ಲಿರುವ ಚೀನಾದ ರಾಜತಾಂತ್ರಿಕ ಅಧಿಕಾರಿ ಲಿ ಸಾಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
textbook case ಎಂದರೇನು? ಚೀನಾ ಅಧಿಕಾರಿ ಹೀಗೆ ಕರೆದಿದ್ದೇಕೆ?
textbook case ಎಂಬುದು ಇಂಗ್ಲಿಷ್ ಭಾಷೆಯ ಪದಪುಂಜ (Idiom). (ಸಾಮಾನ್ಯವಾಗಿ ಕನ್ನಡದಲ್ಲಿ ನಾಣ್ಣುಡಿ ಎಂದು ಕರೆಯಲಾಗುತ್ತದೆ). ಈ ಪದಪುಂಜದ ಅರ್ಥ ಸ್ಪಷ್ಟ ಉದಾಹರಣೆ/ ಇತ್ತೀಚಿನ ಘಟನೆಗಳ ಬಗ್ಗೆ ನಿಖರವಾಗಿ ಉಲ್ಲೇಖಿಸುವ ಉದಾಹರಣೆ ಎಂಬ ಅರ್ಥ ನೀಡುತ್ತದೆ.
ಈಗ ಔಕಸ್ ಒಕ್ಕೂಟದಲ್ಲಿರುವ ರಾಷ್ಟ್ರಗಳು ಪರಮಾಣು ಪ್ರಸರಣಕ್ಕೆ ಇರುವ, ಶೀತಲ ಸಮರದ ಮನಸ್ಥಿತಿ ಇರುವ ಒಕ್ಕೂಟಕ್ಕೆ ಉದಾಹರಣೆ (textbook case) ಆಗಿದೆ ಎಂದು ಚೀನಾದ ಅಧಿಕಾರಿ ಇದೇ ಅರ್ಥದಲ್ಲಿ ಅಮೆರಿಕ ಸೇರಿದಂತೆ ಮೂರು ರಾಷ್ಟ್ರಗಳಿರುವ ಒಕ್ಕೂಟದ ವಿರುದ್ಧ ಕಿಡಿ ಕಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ..