ಕರ್ನಾಟಕ

karnataka

ETV Bharat / international

ಪೂರ್ವ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ದಾಳಿ: ಐವರ ಸಾವು - ಬಾಂಬ್ ದಾಳಿ

ಬುಧವಾರ ತಾಲಿಬಾನ್ ವಾಹನಗಳ ಮೇಲೆ ದಾಳಿ ನಡೆದಿದ್ದು, ಈ ವೇಳೆ ಇಬ್ಬರು ಹೋರಾಟಗಾರರು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Taliban
Taliban

By

Published : Sep 23, 2021, 7:39 AM IST

ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಬುಧವಾರ ತಾಲಿಬಾನ್ ವಾಹನಗಳ ಮೇಲೆ ದಾಳಿ ನಡೆದಿದೆ. ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ನಡೆದ ಇತ್ತೀಚಿನ ಹಿಂಸಾಚಾರದಲ್ಲಿ ಕನಿಷ್ಠ ಇಬ್ಬರು ಹೋರಾಟಗಾರರು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನು ಓದಿ:ಶೋಪಿಯಾನದಲ್ಲಿ​ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾಪಡೆ

ಈ ದಾಳಿಯಲ್ಲಿ ಪ್ರಾಂತ್ಯ ರಾಜಧಾನಿ ಜಲಾಲಾಬಾದ್‌ನ ಸ್ಥಳೀಯ ಗ್ಯಾಸ್ ಸ್ಟೇಷನ್‌ನಲ್ಲಿ ಬಂದೂಕುಧಾರಿಗಳು ತಾಲಿಬಾನ್ ವಾಹನದ ಮೇಲೆ ಗುಂಡು ಹಾರಿಸಿದರು. ಈ ವೇಳೆ, ಇಬ್ಬರು ಹೋರಾಟಗಾರರು ಮತ್ತು ಗ್ಯಾಸ್ ಸ್ಟೇಷನ್ ಅಟೆಂಡೆಂಟ್ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಒಂದು ಮಗು ಕೂಡ ಹತ್ಯೆಗೀಡಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಷರತ್ತುಗಳ ಮೇಲೆ ಹೆಣ್ಣುಮಕ್ಕಳು ಶಾಲೆಗೆ ಹೋಗಬಹುದು: ತಾಲಿಬಾನ್ ಅಧಿಕಾರಿ

ಇನ್ನೊಂದು ವಾಹನದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮತ್ತೊಂದು ಮಗು ಮೃತಪಟ್ಟಿದ್ದು, ಇಬ್ಬರು ತಾಲಿಬಾನಿಗರು ಗಾಯಗೊಂಡಿದ್ದಾರೆ. ಮತ್ತೆ ಜಲಾಲಾಬಾದ್‌ನಲ್ಲಿ ತಾಲಿಬಾನ್ ವಾಹನದ ಮೇಲೆ ನಡೆದ ಬಾಂಬ್ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಆ ವ್ಯಕ್ತಿ ತಾಲಿಬಾನ್ ಅಧಿಕಾರಿಯೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details