ಯಾಂಗೋನ್(ಮ್ಯಾನ್ಮಾರ್) :ಗಣಿಯೊಂದರಲ್ಲಿ ಭೂಕುಸಿತ ಉಂಟಾಗಿ ಸುಮಾರು 70 ಮಂದಿ ಕಾಣೆಯಾಗಿದ್ದಾರೆ ಎಂದು ಎಎಫ್ಬಿ ವರದಿ ಮಾಡಿದೆ. ಹಪ್ಕಂತ್ನಲ್ಲಿರುವ ಪಚ್ಚೆ ಕಲ್ಲಿನ ಗಣಿಯಲ್ಲಿ ಅವಘಡ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದಲ್ಲಿ ಈ ಗಣಿ ಇದೆ. ಓರ್ವ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ರಕ್ಷಣಾ ಸಿಬ್ಬಂದಿಯನ್ನು ಉಲ್ಲೇಖಿಸಿ ಎಎಫ್ಬಿ ವರದಿ ಮಾಡಿದೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.