ಕರ್ನಾಟಕ

karnataka

ETV Bharat / international

ಆಫ್ಘನ್ ಸೇನಾನೆಲೆ ಮೇಲೆ ತಾಲಿಬಾನ್​ ದಾಳಿ: ಏಳು ಪೊಲೀಸರ ಸಾವು - ಆಫ್ಘನ್​ ಸೇನಾನೆಲೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಹಾವಳಿ ಹೆಚ್ಚಾಗಿದ್ದು, ಇಂದು ಬೆಳಗ್ಗೆ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಏಳು ಪೊಲೀಸರು ಮೃತಪಟ್ಟಿದ್ದಾರೆ.

taliban attack
ತಾಲಿಬಾನ್​ ದಾಳಿ

By

Published : Jun 18, 2020, 11:55 AM IST

Updated : Jun 18, 2020, 12:13 PM IST

ಬಘ್ಲಾನ್( ಅಫ್ಘಾನಿಸ್ತಾನ):ಸೇನಾನೆಲೆಯ ಮೇಲೆ ತಾಲಿಬಾನ್​ ಉಗ್ರರು ದಾಳಿ ನಡೆಸಿದ ಕಾರಣ ಏಳು ಮಂದಿ ಪೊಲೀಸರು ಮೃತಪಟ್ಟ ಘಟನೆ ಅಫ್ಘಾನಿಸ್ತಾನದ ಬಘ್ಲಾನ್​ ಪ್ರಾಂತ್ಯದ ರಾಜಧಾನಿಯಾದ ಪುಲಿ ಖುಮ್ರಿಯಲ್ಲಿ ನಡೆದಿದೆ.

ಘಟನೆಯ ಕುರಿತು ಅಲ್ಲಿನ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್​ ಉಗ್ರರಿಗೂ ಹಾನಿಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Last Updated : Jun 18, 2020, 12:13 PM IST

ABOUT THE AUTHOR

...view details